ಹಾವು ಕಚ್ಚಿದರೆ ಏನು ಮಾಡಬೇಕು? ಸಾಧ್ಯವಾದಷ್ಟು ಬೇಗ ವೈದ್ಯಕೀಯ ಸಹಾಯವನ್ನು ಪಡೆಯಬೇಕು. ಆದರೆ ಕೆಲವೊಮ್ಮೆ ತಕ್ಷಣದ ವೈದ್ಯಕೀಯ ಸಹಾಯ ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಹಾವು ಕಚ್ಚಿದಾಗ ಮೊದಲು ಏನು ಮಾಡಬೇಕು ಮತ್ತು ಯಾವ ತಪ್ಪುಗಳನ್ನು ತಪ್ಪಿಸಬೇಕು ಎಂಬುದನ್ನು ಪ್ರತಿಯೊಬ್ಬ ವ್ಯಕ್ತಿಯು ತಿಳಿದಿರುವುದು ಮುಖ್ಯ.
ಹಸಿರು ಹುಲ್ಲಿನ ಮಧ್ಯೆ, ಕೆಲವೊಂದು ಹಾವುಗಳು, ಹಾಯಾಗಿ ಮಲಗಿರುತ್ತವೆ ಅಥವಾ ತನ್ನ ಪಾಡಿಗೆ ತಾನು ಓಡಾಡುತ್ತಾ ಇರುತ್ತವೆ. ಈ ಸಮಯದಲ್ಲಿ ನಾವು ಎಷ್ಟೇ ಜಾಗರೂಕತೆ ವಹಿಸಿದರೂ ಕೂಡ ಕೆಲವೊಮ್ಮೆ ಅಚಾತುರ್ಯ ನಡೆದು ಹೋಗುತ್ತದೆ.
ಸಾಮಾನ್ಯವಾಗಿ ಏನು ತಿಳಿಯದ ಸಣ್ಣ ಮಕ್ಕಳನ್ನು ಬಿಟ್ಟರೆ, ಹಾವಿಗೆ ಹೆದರದೆ ಇರುವ ಯಾವ ಜೀವಿಯೂ ಪ್ರಪಂಚದಲ್ಲಿ ಇಲ್ಲ ಎನಿಸುತ್ತದೆ! ಅದರಲ್ಲೂ ಸಿಟಿಯಲ್ಲಿ ಇರುವವರಿಗೆ, ಅಲ್ಲಿ ಹಾವಿದೆ ಎಂದು ಜೋಕ್ ಮಾಡಿದರೂ ಸಾಕು, ಎದ್ದು ಬಿದ್ದು ಓಡಲು ಶುರು ಮಾಡಿಬಿಡುತ್ತಾರೆ! ಹಳ್ಳಿಕಡೆ ವಾಸಿಸುವ ಜನರಿಗೆ, ಹಾವುಗಳನ್ನು ನೋಡುವುದು ಕಾಮನ್ ಆಗಿ ಬಿಟ್ಟಿದೆ.
ಆದರೆ ಹಳ್ಳಿ ಕಡೆ ಕೇವಲ ಮಳೆಗಾಲದಲ್ಲಿ ಮಾತ್ರವಲ್ಲ, ಇತರ ಸಮಯದಲ್ಲೂ ಕೂಡ ಮನೆಯ ಅಂಗಳದಲ್ಲಿ, ಮರಿ ಹಾವುಗಳೆಲ್ಲಾ ಅಂಗಳದಲ್ಲಿ ಓಡಾಡುತ್ತಾ ಇರುತ್ತವೆ. ಎಷ್ಟೋ ಸಲ ಮನೆಯೊಳಗೆ ಹಾವು ಬರುವುದು ಕೂಡ ಇದೆ! ಆದರೆ ಹೆಚ್ಚಿನವರಿಗೆ ಹಾವಿನಿಂದ ಕಚ್ಚಿಸಿಕೊಂಡವರೆಲ್ಲಾ ಸಾಯುತ್ತಾರೆ ಎನ್ನುವ ನಂಬಿಕೆ ಬಂದು ಬಿಟ್ಟಿದೆ! ಆದರೆ ಇದು ಸುಳ್ಳು. ಹಾವು ಕಚ್ಚಿದ ಕೂಡಲೇ ಪ್ರಥಮ ಚಿಕಿತ್ಸೆ ಹಾಗೂ ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದು ಕೊಂಡರೆ, ಖಂಡಿತವಾಗಿಯೂ ಕೂಡ ಪ್ರಾಣ ಉಳಿಸಿಕೊಳ್ಳಬಹುದು. ಒಂದು ವೇಳೆ ನಿಮಗೆ, ಹಾವು ಕಚ್ಚಿಬಿಟ್ಟರೆ ಕೂಡಲೇ, ಆಸ್ಪತ್ರೆಗೆ ಹೋಗುವ ವ್ಯವಸ್ಥೆ ಮಾಡಿಕೊಳ್ಳಿ. ಈ ಸಮಯ ದಲ್ಲಿ ಕೆಲವರು, ಕಚ್ಚಿದ ಹಾವು, ಅಷ್ಟೊಂದು ವಿಷಕಾರಿ ಅಲ್ಲ,
ಹೀಗಾಗಿ ಹಳ್ಳಿ ಔಷಧಿಗಳನ್ನು ಮಾಡಿದರೆ ಸಾಕಾಗುತ್ತದೆ ಎಂದು ಪುಕ್ಸಟೆ ಸಲಹೆಗಳನ್ನು ನೀಡುತ್ತಾರೆ. ಆದರೆ ನಿಜ ಹೇಳಬೇಕೆಂದರೆ, ಕಚ್ಚಿದ ಹಾವು ವಿಷಕಾರಿ ಆಗಿರಲಿ ಅಥವಾ ಆಗಿರದೆ ಇರಲಿ ನಿಮ್ಮ ಎಚ್ಚರಿಕೆಯಲ್ಲಿ ನೀವು ಇರುವುದು ಒಳ್ಳೆಯದು.
ಈ ಸಮಯದಲ್ಲಿ ಸಮಯ ಕಳೆದು ಹೋಗುವ ಮೊದಲು, ಆದಷ್ಟು ಬೇಗ, ಆಸ್ಪತ್ರೆಗೆ ಹೋಗಿ, ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಆದಷ್ಟು ಬೇಗನೆ ಹತ್ತಿರದ ಆಸ್ಪತ್ರೆ ಕಡೆಗೆ ಧಾವಿಸಿ, ಮೊದಲಿಗೆ ಪ್ರಥಮ ಚಿಕಿತ್ಸೆ ಪಡೆದು ಕೊಳ್ಳಬೇಕು
ಹಾವು ಕಚ್ಚಿದ ಕೂಡಲೇ, ವ್ಯಕ್ತಿಯಲ್ಲಿ ಭಯ ಶುರುವಾ ಗುವುದು ಸಾಮಾನ್ಯ. ಆದರೆ ಈ ಸಮಯದಲ್ಲಿ ಭಯ ಪಡುವ ತಪ್ಪನ್ನು ಮಾಡಲು ಹೋಗಬಾರದು.
ಯಾವುದೇ ಕಾರಣಕ್ಕೂ ಮಾನಸಿಕ ಸ್ಥೈರ್ಯ ಕೆಳೆದು ಕೊಳ್ಳಬಾರದು, ದೇವರ ಮೇಲೆ ಭಾರ ಹಾಕಿ, ಧೈರ್ಯ ವಾಗಿ ಇರಬೇಕು.
ಈ ಸಮಯದಲ್ಲಿ ಗಾಬರಿಗೊಳ್ಳದಿದ್ದರೆ ಅಥವಾ ಭಯ ಪಟ್ಟುಕೊಳ್ಳದಿದ್ದರೆ, ನೀವು ಅರ್ಧ ಯುದ್ಧ ಗೆದ್ದಂತೆ! ಸಾಮಾನ್ಯವಾಗಿ ಭಯ ಪಟ್ಟುಕೊಂಡಾಗ, ನಮ್ಮ ರಕ್ತ ಸಂಚಾರದಲ್ಲಿ ಏರುಪೇರು ಉಂಟಾಗಿ ಬಿಡುತ್ತದೆ! ಇದರಿಂದ ಹೃದಯದ ಬಡಿತ ಕೂಡ ಜಾಸ್ತಿ ಆಗುತ್ತಾ ಹೋಗುತ್ತದೆ ಅಷ್ಟೇ ಅಲ್ಲದೆ ಮೈಕೈ ನಡುಕ ಕೂಡ ಶುರುವಾಗುತ್ತದೆ.
ಈ ವಿಷ್ಯ ನೆನಪಿಡಿ, ಒಂದು ವೇಳೆ ಹಾವು ಕಚ್ಚಿದರೆ, ಮೊದಲಿಗೆ ತಲೆ ಓಡಿಸಬೇಕಾದದು, ಈ ಹಾವಿನ ವಿಷ ನಮ್ಮ ದೇಹದ ಇತರ ಭಾಗಗಳಿಗೆ ಹಬ್ಬದಂತೆ ತಡೆ ಹಾಕುವುದು.
ಹೀಗಾಗಿ ಈ ಸಮಯದಲ್ಲಿ ಜಾಸ್ತಿ ಟೆನ್ಷನ್ ಮಾಡಿ ಕೊಂಡು, ಗಾಬರಿಗೆ ಒಳಗಾಗಬಾರದು. ಇಲ್ಲಾಂದರೆ ನಮ್ಮಿಂದಲೇ ನಮ್ಮ ದೇಹದ ಎಲ್ಲಾ ಕಡೆಗೂ ಕೂಡ ವಿಷ ಹರಡುವಂತೆ ಆಗುತ್ತದೆ!
ಅಷ್ಟೇ ಅಲ್ಲ, ಈ ಸಮಯದಲ್ಲಿ ಆ ಕಡೆ, ಈ ಕಡೆ ಓಡಾಡ ಬೇಡಿ. ಯಾಕೆಂದರೆ, ಒಂದು ವೇಳೆ, ಈ ಸಮಯದಲ್ಲಿ ಗಾಬರಿಗೊಂಡು, ಆ ಕ್ಷಣಕ್ಕೆ ಏನು ಮಾಡಬೇಕೆಂದು ತಿಳಿಯದೆ, ಓಡಾಡುತ್ತಾ ಇದ್ದರೆ, ದೇಹದಲ್ಲಿ ವೇಗವಾಗಿ ರಕ್ತ ಹರಿಯಲು ಶುರುವಾಗುತ್ತದೆ!ಇದರಿಂದ ಹಾವಿನ ವಿಷ ನಮ್ಮ ದೇಹದ ರಕ್ತಸಂಚಾರ ದಲ್ಲಿ ಬೆರೆತು, ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ!