ಚೇಸಿಂಗ್ ಮಾಡಿ,ಇರಾನಿ ಗ್ಯಾಂಗ್ ಹಿಡಿದ ಹುಬ್ಬಳ್ಳಿ ಪೋಲೀಸರು.

Share to all

ಹುಬ್ಬಳ್ಳಿ ಪೋಲೀಸರ ಭರ್ಜರಿ ಕಾರ್ಯಾಚರಣೆ. ಐವರು ಇರಾನಿ ಗ್ಯಾಂಗ್ ಹಿಡಿಯುವಲ್ಲಿ ಯಶಸ್ವಿ

ಹುಬ್ಬಳ್ಳಿ:-ಬೆಳಗಾವಿಯ ಕಡೇಬಜಾರ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಡ್ರ್ಯೆಪುಡ್ಸ ಅಂಗಡಿಯಲ್ಲಿ ಗಮನ ಬೇರೆಡೆ ಸೆಳೆದು ಐವತ್ತು ಸಾವಿರ ರೂಪಾಯಿ ಎಗರಿಸಿ ಪರಾರಿಯಾಗಿದ್ದ ಐದು ಜನ ಕಳ್ಳರ ತಂಡವನ್ನು ಹುಬ್ಬಳ್ಳಿಯಲ್ಲೆ ಭೇದಿಸಿ ಬೆಳಗಾವಿ ಪೋಲೀಸರಿಗೆ ಒಪ್ಪಿಸಿದ್ದಾರೆ.

ಚೆಂದುಳ್ಳಿ ಚೆಲುವೆಯರನ್ನು ಮುಂದಿಟ್ಟುಕೊಂಡು ಜನರ ಗಮನವನ್ನು ಬೇರೇಕಡೆ ಹೋಗುವಂತೆ ಮಾಡಿ ಕಳ್ಳತನ ಮಾಡುವ ಖತರನಾಕ ಕಳ್ಳರು ಇವರಾಗಿದ್ದು.ಹಲವು ಕಡೆ ಇಂತಹ ಕಳ್ಳತನ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಇಂದು ಬೆಳಗಾವಿಯಿಂದ ಹುಬ್ಬಳ್ಳಿ ಪೋಲೀಸರಿಗೆ ಮಾಹಿತಿ ಬರುತ್ತಿದ್ದಂತೆ ಪೋಲೀಸ ಆಯುಕ್ತರ ಮಾರ್ಗದರ್ಶನ ದಲ್ಲಿ ಎಸಿಪಿ ಸೇರಿದಂತೆ ಕಸಬಾ ಪಿಆಯ್ ರಾಘವೇಂದ್ರ. ಹಳ್ಳೂರ ಹಾಗೂ ಗೋಕುಲ ಪಿಎಸ್ಐ ದೇವೇಂದ್ರ ಹಾಗೂ ಎಪಿಎಂಸಿ ಪಿಎಸ್ಐ ಸಾತೆಣ್ಣವರ ಸೇರಿ ಮಪ್ತಿಯಲ್ಲಿ ಇರಾನಿ ಗ್ಯಾಂಗನ ಕಾರನ್ನು ಬೆನ್ನತ್ತಿ ಹಿಡಿದಿದ್ದಾರೆ.

ಈ ಕಳ್ಳರ ಗ್ಯಾಂಗನ್ನು ಬೆನ್ನತ್ತಿ ಕಸಬಾ ಪೋಲೀಸ ಠಾಣಾ ವ್ಯಾಪ್ತಿಯ ವೀರಭದ್ರೇಶ್ವರ ದೇವಸ್ಥಾನದ ಬಳಿ ಖೆಡ್ಡಾಕ್ಕೆ ಕೆಡವಿ ವಿಚಾರಣೆ ಮಾಡಲಾಗಿ ಹಾಗೂ ಬೆಳಗಾವಿಯಲ್ಲಿ ಕಳ್ಲತನ ಮಾಡಿದ ಅಂಗಡಿಯಲ್ಲಿಯ ಸಿಸಿಟಿವಿ ಪುಟೇಜ್ ಚೆಕ್ಕ್ ಮಾಡಿದಾಗ ಅವರ ಗುರುತು ಸಿಕ್ಕಿದ್ದು ಅವರನ್ನು ಬೆಳಗಾವಿ ಪೋಲೀಸರಿಗೆ ಹಸ್ತಾಂತರಿಸಿದ್ದಾರೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author