ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ದೇವರಿಗೆ ಸೇಫ್ಟಿ ಇಲ್ಲದಂತಾಗಿದೆ. ಸಾಮಾನ್ಯವಾಗಿ ನೀವು ಚಿನ್ನ ,ಬೆಳ್ಳಿ ,ಬೈಕು, ಕಾರು ಎಲ್ಲವನ್ನೂ ಕದಿಯೋರನ್ನ ನೋಡಿರ್ತೀರಿ. ಆದ್ರೆ ಇಂತಹ ಕಳ್ಳರನ್ನ ನೀವೆಲ್ಲೂ ನೋಡಿರೋಕೆ ಸಾಧ್ಯವಿಲ್ಲ. ಎಸ್ ಈ ಖದೀಮರು ಜಗತ್ತನ್ನೆ ಕಾಪಾಡೋ ಭಗವಂತನನ್ನೇ ಕದ್ದು ಎಸ್ಕೇಪ್ ಆಗಿದ್ದಾರೆ. ರಾಜಧಾನಿ ಬೆಂಗಳೂರಿನ ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ದೇವರ ಮೂರ್ತಿಯನ್ನೇ ಕಳ್ಳರು ಕದ್ದು ಪರಾರಿಯಾದ ಘಟನೆ ಜರುಗಿದೆ.
https://x.com/HAchrappady/status/1834433928435998734?ref_
ಗಣೇಶನ ಮೂರ್ತಿಯನ್ನೇ ಕಳ್ಳರು ಎಗರಿಸಿದ್ದಾರೆ. ಬೈಕ್ನಲ್ಲಿ ಮಧ್ಯರಾತ್ರಿ ಬಂದ ಕಳ್ಳರು ಗಣೇಶ ಮೂರ್ತಿಯನ್ನು ಕದ್ದು ಹೊತ್ತೊಯ್ದಿದ್ದಾರೆ. ಆ ಮೂಲಕ ಹಬ್ಬದ ಸೀಸನ್ನಲ್ಲಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಅಂಗಡಿಯ ಮಾಲೀಕರು ಗಣೇಶನ ಮೂರ್ತಿಯನ್ನು ಯಾರು ಕಳ್ಳತನ ಮಾಡುತ್ತಾರೆ ಎಂದು ಅಂಗಡಿಯ ಹೊರ ಭಾಗದಲ್ಲಿ ಇಟ್ಟಿದ್ದರು. ಇದನ್ನು ಗಮನಿಸಿದ ಕಳ್ಳರು ಒಂದು ಗಂಟೆ ರಾತ್ರಿ ವೇಳೆ ಗಣೇಶ ಮೂರ್ತಿ ಕದ್ದು ಎಸ್ಕೇಪ್ ಆಗಿದ್ದಾರೆ. ಮೂರ್ತಿ ಕದ್ದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಗಣೇಶ ಮೂರ್ತಿ ಕಳ್ಳತನ ಮಾಡಿರುವ ಬಗ್ಗೆ ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.