ನವಲಗುಂದ ಗುಡ್ಡದ ಮಣ್ಣುಗಾರಿಕೆ ಪ್ರಕರಣ..ಅದರಲ್ಲಿ ಅಧಿಕಾರಿಗಳು ಸಿಕ್ಕುಬೀಳ್ತಾರೆ..ಶಂಕರ ಪಾಟೀಲ ಧ್ವನಿ ಎತ್ತಿದ್ದು ಸರಿ ಇದೆ..ಪ್ರಹ್ಲಾದ ಜೋಶಿ.
ಹುಬ್ಬಳ್ಳಿ:-ಯಾವುದೇ ನೈಸರ್ಗಿಕ ಸ್ಬತ್ತಿನ ಬಳಕೆಗೆ ಅನುಮತಿಬೇಕು ಮತ್ತು ಟೆಂಡರ್ ಕರೆಯಬೇಕು.ನವಲಗುಂದ ಪಾರಂಪರಿಕ ಗುಡ್ಡದ ಮಣ್ಣು ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧ ಯಾರಾದರೂ ಕೋಟ್೯ಗೆ ಹೋದರೆ ಅಧಿಕಾರಿಗಳಿ ಸಿಕ್ಕಿಬೀಳತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಜೋಶಿ ಎಲ್ಲಿಯೇ ಮೈನಿಂಗ್ ಮಾಡಬೇಕಾದರೆ ಪೂರ್ಣ ಪ್ರಮಾಣದ ಅದ್ಯಯನ ಮಾಡಬೇಕು ಮತ್ತು ಫರ್ಮಿಶನ್ ತೆಗೆದುಕೊಳ್ಳಬೇಕು.
ಆದರೆ ನವಲಗುಂದ ಗುಡ್ಡದ ಗಣಿಗಾರಿಕೆಯಲ್ಲಿ ಅವರಿಗೆ ಫರ್ಮಿಶನ್ ಯಾರು ಕೊಟ್ಟರು.ಅದ್ಯಯನ ಮಾಡಿದ್ದೆಲ್ಲಿ,ಅದು ಯಾವುದೂ ಇಲ್ಲಾ..ಅದಕ್ಕೆ ಅಧಿಕಾರಿಗಳೇ ಉತ್ತರ ಕೊಡಬೇಕು.ಆ ಪಾರಂಪರಿಕ ಗುಡ್ಡದ ಮಣ್ಣುಗಾರಿಕೆ ವಿಚಾರವಾಗಿ ಶಂಕರಪಾಟೀಲ ಮುನೇನಕೊಪ್ಪ ಧ್ವನಿ ಎತ್ತಿರುವುದು ಸರಿ ಇದೆ.ಅದನ್ನು ಮುಂದುವರೆಸಲು ಸಲಹೆ ಕೊಡುತ್ತೇನೆ ಎಂದರು.