Diamond League: ಡೈಮಂಡ್ ಲೀಗ್ ಟ್ರೋಫಿ ಗೆಲ್ತಾರಾ ನೀರಜ್ ಚೋಪ್ರಾ!? ಅಂತಿಮ ಹಣಾಹಣಿ ಯಾವಾಗ!? ಇಲ್ಲಿದೆ ಡೀಟೈಲ್ಸ್!

Share to all

ಭಾರತ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರು ಡೈಮಂಡ್ ಮೇಲೆ ಕಣ್ಣಿಟ್ಟಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ 89.45 ಮೀಟರ್ ಭರ್ಜಿ ಎಸೆದು ಬೆಳ್ಳಿ ಪದಕ ಗೆದ್ದಿದ್ದ ನೀರಜ್ ಈ ಬಾರಿಯ ಡೈಮಂಡ್ ಲೀಗ್​ನಲ್ಲಿ ದ್ವಿತೀಯ ಸ್ಥಾನ ಪಡೆದು ಫೈನಲ್​ಗೆ ಅರ್ಹತೆ ಪಡೆದಿದ್ದರು.

ಅದರಂತೆ ಭಾನುವಾರ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಭಾರತದ ಚಿನ್ನದ ಹುಡುಗ ಇತರೆ 6 ಸ್ಪರ್ಧಿಗಳ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಭಾನುವಾರ ನಡೆಯಲಿರುವ ಸ್ವಿಟ್ಜರ್ಲೆಂಡ್‌ನ ಲೂಝನ್​ನಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಭಾರತದ ಚಿನ್ನದ ಹುಡುಗ ಇತರೆ 6 ಸ್ಪರ್ಧಿಗಳ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಆಗಸ್ಟ್ 24 ರಂದು ನಡೆದ ಡೈಮಂಡ್ ಲೀಗ್ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ ಸೀಸನ್ ಬೆಸ್ಟ್ ಥ್ರೋ ಎಸೆದಿದ್ದರು. 89.49 ಮೀಟರ್ ದೂರಕ್ಕೆ ಭರ್ಜಿ ಎಸೆಯುವ ಮೂಲಕ ಭಾರತೀಯ ತಾರೆ ದ್ವಿತೀಯ ಸ್ಥಾನವನ್ನು ಪಡೆದಿದ್ದರು. ಅಂದರೆ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ 89.45 ಮೀಟರ್ ಎಸೆದಿದ್ದ ನೀರಜ್ ಡೈಮಂಡ್ ಲೀಗ್​ನಲ್ಲಿ 89.49 ಮೀಟರ್ ದೂರವನ್ನು ಕ್ರಮಿಸುವಲ್ಲಿ ಯಶಸ್ವಿಯಾಗಿದ್ದರು.

ಇನ್ನು ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದ 26ರ ಹರೆಯದ ಗ್ರೆನಡಾದ ಅ್ಯಂಡರ್ಸನ್ ಪೀಟರ್ಸ್ ಅವರು 90.81 ಮೀಟರ್‌ ದೂರಕ್ಕೆ ಎಸೆಯುವ ಮೂಲಕ ಅಗ್ರಸ್ಥಾನ ಪಡೆದಿದ್ದರು. ಹಾಗೆಯೇ ಜರ್ಮನಿಯ ಜೂಲಿಯನ್ ವೆಬರ್ 87.08 ಮೀಟರ್ ಎಸೆದು ಮೂರನೇ ಸ್ಥಾನ ತಮ್ಮದಾಗಿಸಿಕೊಂಡಿದ್ದರು. ಅದರಂತೆ ಇದೀಗ ಅರ್ಹತಾ ಸುತ್ತಿನಲ್ಲಿ ಮೊದಲ 7 ಸ್ಥಾನಗಳನ್ನು ಪಡೆದವರು ಇದೀಗ ಫೈನಲ್​ ಸುತ್ತಿನಲ್ಲಿ ಕಣಕ್ಕಿಳಿಯಲಿದ್ದಾರೆ.

ಫೈನಲ್ ಸುತ್ತಿನಲ್ಲಿರುವ ಸ್ಪರ್ಧಿಗಳು:
1) ಆಂಡರ್ಸನ್ ಪೀಟರ್ಸ್ – ಗ್ರೆನಡಾ
2) ಜೂಲಿಯನ್ ವೆಬರ್ – ಜರ್ಮನಿ
3) ಜಾಕುಬ್ ವಡ್ಲೆಜ್ – ಜೆಕಿಯಾ
4) ನೀರಜ್ ಚೋಪ್ರಾ – ಭಾರತ
5) ಆಂಡ್ರಿಯನ್ ಮರ್ಡೇರ್ – ಮೊಲ್ಡೊವಾ
6) ರೋಡ್ರಿಕ್ ಜೆಂಕಿ ಡೀನ್ – ಜಪಾನ್
7) ಆರ್ಟರ್ ಫೆಲ್ಫ್ನರ್ – ಉಕ್ರೇನ್

ಡೈಮಂಡ್ ಲೀಗ್ ಜಾವೆಲಿನ್ ಫೈನಲ್‌ ಪಂದ್ಯ ಯಾವಾಗ?

ನೀರಜ್ ಚೋಪ್ರಾ ಕಣಕ್ಕಿಳಿಯಲಿರುವ ಜಾವೆಲಿನ್ ಥ್ರೋ ಫೈನಲ್ ಪಂದ್ಯವು ಭಾನುವಾರ, ಸೆಪ್ಟೆಂಬರ್ 15 ರಂದು ನಡೆಯಲಿದೆ.

ಡೈಮಂಡ್ ಲೀಗ್ ಫೈನಲ್‌ ಎಷ್ಟು ಗಂಟೆಗೆ ಶುರು?

ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯು ಭಾರತೀಯ ಕಾಲಮಾನ 1:52 AM IST ಕ್ಕೆ ಪ್ರಾರಂಭವಾಗಲಿದೆ.


Share to all

You May Also Like

More From Author