ಸಾವಿನಲ್ಲೂ ಸಾರ್ಥಕತೆ ಮೆರೆದ ಎಎಸ್ಐ ನಾಭಿರಾಜ್ ಕುಟುಂಬಸ್ಥರು.ನಾಭಿರಾಜ್ ನೇತ್ರ ದಾನ ಮಾಡಿದ ಕುಟುಂಬ.
ಹುಬ್ಬಳ್ಳಿ:-ಕಳೆದ ಮಂಗಳವಾರ ಡ್ಯುಟಿ ಮೇಲಿದ್ದಾಗಲೇ ಫ್ಲೈ ಓವರ್ ಕಾಮಗಾರಿಯ ರಾಡ್ ಬಿದ್ದು ASI ನಾಭಿರಾಜ್ ಗಂಭೀರವಾಗಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾ ಸಾವನ್ನಪ್ಪಿದ್ದಾನೆ..
ಈಗ ಕುಟುಂಬಸ್ಥರು ನಾಭಿರಾಜ್ ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ನೇತ್ರದಾನ ಪ್ರಕ್ರಿಯೆ ಆರಂಭವಾಗಿದೆ. ಮಾಧ್ಯಮಗಳಿಗೆ ನಾಭಿರಾಜ್ ಮಾವ ಶಾಂತರಾಜ್ ಹೇಳಿಕೆ ನೀಡಿದ್ದಾರೆ.ನಾಭಿರಾಜ್ ಇತ್ತೀಚಿಗೆ ಒಂದು ದಿನವೂ ರಜೆ ಹಾಕದೆ ಕರ್ತವ್ಯನಿರ್ಹಿಸುತ್ತಿದ್ದರು.. ಈಗ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.ಕಣ್ಣು ದಾನ ಮಾಡಬೇಕು ಎನ್ನುವುದು ಅವರ ಇಚ್ಛೆ ಆಗಿತ್ತು.. ಉಳಿದ ಅಂಗಾಂಗಗಳನ್ನು ಸಹ ದಾನ ಮಾಡಲು ಸಹ ನಾವು ಮುಂದಾಗಿದ್ದೆವು..ಆದರೆ ಸದ್ಯ ಅವರು ಯಾವುದೇ ಅಂಗಾಂಗಗಳು ಕಾರ್ಯ ಮಾಡುತ್ತಿಲ್ಲ.ಇಂದು ಧಾರವಾಡದ ಸತ್ತೂರು ರುದ್ರಭೂಮಿಯಲ್ಲಿ ನಾಭಿರಾಜ್ ಅತ್ಯಂತ ಕ್ರಿಯೆ ನಡೆಯುತ್ತದೆ ಎಂದು ಹೇಳಿದ್ದಾರೆ.