ಹುಬ್ಬಳ್ಳಿ ವಿಮಾನ‌ ನಿಲ್ದಾಣ ಕಾರ್ಮಿಕರ ಅಹವಾಲು ಆಲಿಸಿ ತಕ್ಷಣವೇ ಸ್ಪಂದಿಸಿದ ಸಚಿವ ಸಂತೋಷ್ ಲಾಡ್

Share to all

ಹುಬ್ಬಳ್ಳಿ ವಿಮಾನ‌ ನಿಲ್ದಾಣ ಕಾರ್ಮಿಕರ ಅಹವಾಲು ಆಲಿಸಿ ತಕ್ಷಣವೇ ಸ್ಪಂದಿಸಿದ ಸಚಿವ ಸಂತೋಷ್ ಲಾಡ್

ಹುಬ್ಬಳ್ಳಿ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ತಮ್ಮಲ್ಲಿ ಅಹವಾಲು ಸಲ್ಲಿಸೋಕೆ ಬರುವ ಜನರಿಗೆ ಶೀಘ್ರವಾಗಿ ಹಾಗೇ ಆಪ್ತವಾಗಿ ಸ್ಪಂದಿಸುತ್ತಾರೆ ಅಲ್ಲದೇ ಸಾಧ್ಯ ಆದಷ್ಟು ಅವರ ಕಷ್ಟಕ್ಕೆ ಸಹಾಯ ಮಾಡುತ್ತ ಬರ್ತಾರೆ ಎಂಬುದು ಎಲ್ಲರಿಗೂ ಗೊತ್ತು.

ಇವತ್ತೂ ಕೂಡ ಧಾರವಾಡ ಜಿಲ್ಲೆಯ ಕಾರ್ಯಕ್ರಮ ಮುಗಿಸಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ ಮರಳಲು ಆಗಮಿಸಿದ್ದ ಲಾಡ್ ಅವರಿಗೆ ಏರ್ಪೋರ್ಟ್ ನಲ್ಲಿ ಕೆಲಸ ಮಾಡುವ ಕಾರ್ಮಿಕರು ತಮ್ಮ ವೇತನ ಪರಿಷ್ಕರಣೆಯ ಕುರಿತು ಅಹವಾಲು ಸಲ್ಲಿಸಿದರು.

ಕೂಡಲೇ ಅವರಿಗೆ ಸ್ಪಂದಿಸಿದ ಸಚಿವ ಲಾಡ್ ಅವರು ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಕರೆ ಮಾಡಿ ಶೀಘ್ರವೇ ಈ ಕಾರ್ಮಿಕರನ್ನು ನೇಮಿಸಿರುವ ಗುತ್ತಿಗೆದಾರನಿಗೆ ನೋಟಿಸ್ ಜಾರಿ ಮಾಡುವಂತೆ ಹಾಗೂ ಕೇಂದ್ರ ಕಾರ್ಮಿಕ‌ ನೀತಿ ಅನ್ವಯ ವೇತನ ಸಿಗುವಂತೆ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author