Bigg Boss Kannada 11: ಬಿಗ್ ಬಾಸ್ ಕನ್ನಡ 11 ಡೇಟ್ ಅನೌನ್ಸ್! ಸುದೀಪ್ ಆ್ಯಂಕರ್, ಇದು ಹೊಸ ಅಧ್ಯಾಯ

Share to all

ಬಿಗ್​ ಬಾಸ್​ ಕನ್ನಡ ಸೀಸನ್​ 11’ ಕಾರ್ಯಕ್ರಮದ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್​ 29ಕ್ಕೆ ಬಿಗ್​ ಬಾಸ್​ ಹೊಸ ಸೀಸನ್​ ಆರಂಭವಾಗಲಿದೆ. ಈ ಬಾರಿ ಕೂಡ ಕಿಚ್ಚ ಸುದೀಪ್​ ಅವರೇ ನಿರೂಪಕರಾಗಿ ಮುಂದುವರಿಯುತ್ತಿದ್ದಾರೆ. ಈ ಬಗ್ಗೆ ಅಪ್​ಡೇಟ್​ ನೀಡಲು ‘ಕಲರ್ಸ್​ ಕನ್ನಡ’ ಟಿವಿಯಲ್ಲಿ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕಿಚ್ಚ ಸುದೀಪ್​ ಅವರು ಅಬ್ಬರಿಸಿದ್ದಾರೆ.

ಇಷ್ಟು ವರ್ಷಗಳ ಕಾಲ ಸುದೀಪ್​ ಅವರು ಯಶಸ್ವಿಯಾಗಿ ಬಿಗ್​ ಬಾಸ್​ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಅವರಿಂದಾಗಿ ಎಲ್ಲ 10 ಸೀಸನ್​ಗಳಿಗೆ ಸ್ಟಾರ್ ಮೆರುಗು ಸಿಕ್ಕಿತು. ಈಗ ಸಡನ್​ ಆಗಿ ಬೇರೆ ಆ್ಯಂಕರ್​ ಬರುತ್ತಾರೆ ಎಂದರೆ ಅಭಿಮಾನಿಗಳು ಅದನ್ನು ಸ್ವೀಕರಿಸುವುದು ಕಷ್ಟ. ಹಾಗಿದ್ದರೂ ಕೂಡ ಕೆಲವು ಅನುಮಾನಗಳು ಹುಟ್ಟಿಕೊಂಡಿದ್ದವು. ಸುದೀಪ್​ ಬದಲು ಬೇರೆಯವರು ಈ ಬಾರಿ ನಿರೂಪಣೆ ಮಾಡಬಹುದು ಎಂದು ಕೆಲವರು ಊಹಿಸಿದ್ದರು. ಆದರೆ ಅದು ನಿಜವಾಗಿಲ್ಲ.

ಗಿಚ್ಚಿ ಗಿಲಿಗಿಲಿ 3’ ಗ್ರ್ಯಾಂಡ್​ ಫಿನಾಲೆಯ ಸಂಚಿಕೆಯ ನಡುವೆ ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಹೊಸ ಪ್ರೋಮೋ ಬಿತ್ತರ ಆಗಿದೆ. ಇದರಲ್ಲಿ ಸುದೀಪ್​ ಅವರು ಖಡಕ್​ ಆಗಿ ಡೈಲಾಗ್​ ಹೊಡೆದಿದ್ದಾರೆ. ‘10 ವರ್ಷದಿಂದ ಒಂದು ಲೆಕ್ಕ, ಈಗಿಂದ ಬೇರೇನೇ ಲೆಕ್ಕ. ಇದು ಹೊಸ ಅಧ್ಯಾಯ’ ಎಂದು ಕಿಚ್ಚ ಸುದೀಪ್​ ಹೇಳಿದ್ದಾರೆ. ಈ ಪ್ರೋಮೋ ನೋಡಿ ಸುದೀಪ್​ ಅಭಿಮಾನಿಗಳಿಗೆ ಖುಷಿ ಆಗಿದೆ.

‘ಇನ್ಮೇಲೆ ಕಲರ್ಸ್​ ಕನ್ನಡ ನಂಬರ್​ 1 ಆಗುತ್ತೆ’ ಎಂದು ಕೆಲವು ಅಭಿಮಾನಿಗಳು ಭವಿಷ್ಯ ನುಡಿದಿದ್ದಾರೆ. ಇದು 11ನೇ ಸೀಸನ್​ ಆದ್ದರಿಂದ ಈ ಬಾರಿ ಬಿಗ್​ ಬಾಸ್​ ಶೋ ತುಂಬ ಸ್ಪೆಷಲ್​ ಆಗಿರಲಿದೆ ಎಂಬ ನಿರೀಕ್ಷೆ ವೀಕ್ಷಕರಿಗೆ ಇದೆ. ಅದಕ್ಕೆ ತಕ್ಕಂತೆಯೇ ಪ್ರೋಮೋದಲ್ಲಿ ಸುದೀಪ್​ ಅವರು ‘ಇದು ಹೊಸ ಅಧ್ಯಾಯ’ ಎಂದು ಹೇಳಿದ್ದಾರೆ.


Share to all

You May Also Like

More From Author