ಇತ್ತೀಚೆಗೆ ಕಾಮಾಕ್ಷಿಪಾಳ್ಯ ಲಿಮಿಟ್ಸ್ ನಲ್ಲಿ ನಡೆದಿರೋ ಘಟನೆ ಪೊಲೀಸ್ರು ಇದ್ದಾರಾ ಇಲ್ವಾ ಅನ್ನೋ ಪ್ರಶ್ನೆ ಮಾಡುವಂತಿದೆ.. ನಡು ರಸ್ತೆಯಲ್ಲೇ ಯುವಕನ ಬಟ್ಟೆ ಬಿಚ್ಚಿ ರೌಡಿಶೀಟರ್ ಒಬ್ಬ ಹಲ್ಲೆ ಮಾಡಿ ವಿಡಿಯೋ ಬಿಟ್ಟಿದಾನೆ.. ಇದು ಯಾವುದೋ ಉತ್ತರ ಭಾರತದ ರಾಜ್ಯಗಳಾದ ಯುಪಿ ಅಥವಾ ಬಿಹಾರದಲ್ಲಿ ನಡೆದಿರೋ ಘಟನೆ ಅಲ್ಲ.. ನಮ್ಮ ಬೆಂಗಳೂರಿನ ಕಾಮಾಕ್ಷಿಪಾಳ್ಯ ಲಿಮಿಟ್ಸ್ ನ ಸುಂಕದಕಟ್ಟೆಯಲ್ಲಿ ನಡೆದಿರೋ ಘಟನೆ.. ಓರ್ವ ಯುವಕನ ಮೇಲೆ ಅಟ್ಟಹಾಸ ಮೆರೆದಿರೋ ರೌಡಿಶೀಟರ್ ಒಬ್ಬ ಆತನ ಬಟ್ಟೆ ಬೆಚ್ಚಿ ನನ್ನ ಟಚ್ ಮಾಡ್ತಿಯೇನೋ ಅಂತಾ ಅವಾಜ್ ಹಾಕಿ ಹಲ್ಲೆ ಮಾಡಿದ್ದಲ್ಲದೇ ಆತನನ್ನ ಬೆತ್ತಲೆ ಮಾಡಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಿಟ್ಟಿದ್ದಾನೆ..
ಅಂದ್ಹಾಗೆ ಹೀಗೆ ಪೊಲೀಸರಂದ್ರೆ ಭಯವೇ ಇಲ್ಲವೆಂಬಂತೆ ತನ್ನ ಪಟಾಲಂನಿಂದ ದರ್ಪ ತೋರಿದ್ದು ರಾಜಗೋಪಾಲ ನಗರ ರೌಡಿಶೀಟರ್ ಪವನ್ ಅಲಿಯಾಸ್ ಕಡಬು.. ಹಲವು ಕ್ರೈಂ ಕೇಸ್ ಗಳಲ್ಲಿ ಭಾಗಿಯಾಗಿರೋ ತುಮಕೂರು ಮೂಲದ ಕಡಬು ಇತ್ತೀಚೆಗೆ ಜೈಲಿನಿಂದ ರಿಲೀಸ್ ಅಗಿದ್ದ.. ಈತನ ವಿರುದ್ಧ ಕಾಮಾಕ್ಷಿಪಾಳ್ಯ ಠಾಣೆಯಲ್ಲೂ ಒಂದು ಕೇಸ್ ಇದ್ದು ವಾರೆಂಟ್ ಕೂಡ ಇಶ್ಯೂ ಆಗಿದೆ.. ವಾರೆಂಟ್ ಇಶ್ಯೂ ಹಿನ್ನೆಲೆ ಕಾಮಾಕ್ಷಿಪಾಳ್ಯ ಪೊಲೀಸ್ರು ಹುಡುಕಾಟ ನಡೆಸ್ತಿದ್ರು.. ಆದ್ರೆ ಬೆಂಗಳೂರಿನಲ್ಲಿ ಓಡಾಡ್ಕೊಂಡೇ ಇದ್ದ ಪವನ್ ಅಲಿಯಾಸ್ ಕಡಬು ಪೊಲೀಸರ ಕೈಗೆ ಸಿಕ್ಕಿಲ್ಲ..
ಆದ್ರೆ ಯುವಕನೊಬ್ಬನನ್ನ ಮಧ್ಯ ರಾತ್ರಿ ಹಿಡಿದು ರಾಜಾರೋಶವಾಗಿ ಆತನ ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ್ದಲ್ಲದೆ ಬೆತ್ತಲೆಯೇ ಆತನನ್ನ ಮನೆಗೆ ಓಡಿಸಿ ವಿಡಿಯೋ ರೆಕಾರ್ಡ್ ಮಾಡಿ ಹರಿಬಿಟ್ಟಿದ್ದಾನೆ.. ಅಂದ್ಹಾಗೆ ಹಲ್ಲೆಗೊಳಗಾಗಿರೋ ಯುವಕ ಬೇರೆ ಯಾರೂ ಅಲ್ಲ ಇದೇ ಕಾಮಾಕ್ಷಿಪಾಳ್ಯ ಪೊಲೀಸರ ಇನ್ಫಾರ್ಮರ್ ಅಂತಾ ಹೇಳಲಾಗ್ತಿದೆ.. ಈ ಹಿಂದೆ ಗಾಂಜಾ ಸೇದೋ ವಿಚಾರಕ್ಕೆ ಹಲ್ಲೆಗೊಳಗಾದ ಯುವಕ ಪವನ್ @ ಕಡಬು ಗೆ ಬುದ್ದಿ ಹೇಳಿದ್ನಂತೆ.. ಗಾಂಜಾ ಸೇದ್ಬೇಡ ಅಂದಿದ್ನಂತೆ.. ಅದೇ ವಿಚಾರಕ್ಕೆ ಆತನನ್ನ ಹುಡುಕಿ ಹೀಗೆ ಬೆತ್ತಲೆ ಮಾಡಿ ಹಲ್ಲೆ ಮಾಡಿದ್ದಾನೆ ಎನ್ನಲಾಗ್ತಿದೆ..
ಇನ್ನು ವಿಡಿಯೋ ಮಾಧ್ಯಮಗಳಲ್ಲಿ ಬರೋವರ್ಗೂ ಕೂಡ ಈ ವಿಚಾರ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಗೊತ್ತೆ ಇಲ್ವಂತೆ.. ಈ ಘಟನೆ ಆಗಿದ್ದು ಒಂದ್ಕಡೆ ಆದ್ರೆ ಎರಡು ವಿಚಾರಗಳು ಪೊಲೀಸರ ಮೇಲೆ ಹೆಚ್ಚು ಅನುಮಾನ ಹುಟ್ಟಿಸಿವೆ.. ಒಂದು ತಾವು ಹುಡುಕ್ತಿದ್ದ ರೌಡಿಶೀಟರ್ ತಮ್ಮ ಲಿಮಿಟ್ಸ್ ನಲ್ಲೇ ಓಡಾಡ್ಕೊಂಡಿದ್ರೂ ಪೊಲೀಸರಿಗೆ ಆತನ ಬಗ್ಗೆ ಅನುಮಾನವೇ ಇರ್ಲಿಲ್ವಾ..? ಅಥವಾ ತಮ್ಮ ಇನ್ಫಾರ್ಮರ್ ಮೇಲೆ ಈ ರೀತಿ ಹಲ್ಲೆ ಆಗಿದ್ರೂ ಒಂಚೂರು ಮಾಹಿತಿ ಸಿಕ್ಕಿಲ್ವಾ..? ಹೀಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದು ಪುಡಿ ರೌಡಿ ಗಳಿಗೆ ಹೆಡೆಮರಿ ಕಟ್ಟಿ . ಈ ಮೂಲಕ ಇನ್ಫಾರ್ಮರ್ಸ್ ಗಳಿಗೆ ಧೈರ್ಯ ನೀಡಬೇಕಿದೆ..