ಯಾದಗಿರಿ
ಅಕ್ರಮ ಮರಳು ದಂಧೆ ವಿಡಿಯೋ ಮಾಡಲು ಹೋದ ಇಬ್ಬರು ಯುವಕರ ಮೇಲೆ ಹಲ್ಲೆ ಮಾಡಿ ಕಾರಿನ ಡಿಕ್ಕಿಯಲ್ಲಿ ಹಾಕಿದ ಅಮಾನವೀಯ ಘಟನೆ ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ವಿಭೂತಳ್ಳಿ ಬಳಿ ನಡೆದಿದೆ.
ಅಕ್ರಮ ಮರಳು ದಂಧೆ ವಿಡಿಯೋ ಮಾಡಲು ಹೋಗಿದ್ದ ರಾಜು ಮತ್ತು ಶರಣಗೌಡ ಎಂಬುವರನ್ನು ಗ್ರಾಮ ಪಂಚಾಯತಿ ಸದಸ್ಯ ವಿಜಯ ರಾಠೋಡ ಹಾಗೂ ಬಸುರೆಡ್ಡಿ ಸೇರಿದಂತೆ ಏಳೆಂಟು ಜನರು ಸೇರಿಕೊಂಡು ಅಕ್ರಮ ಮರಳು ದಂಧೆಯ ವಿಡಿಯೋ ಮಾಡಲು ಹೋಗಿದ್ದ ಇಬ್ಬರನ್ನು ಕರೆತಂದು ಮೊದಲು ಅವರ ಮೇಲೆ ಹಲ್ಲೆ ಮಾಡಿ,ಕಾರಿನ ಡಿಕ್ಕಿಯೊಳಗೆ ಹಾಕಿ ಹಲ್ಲೆ ಮಾಡತಾರೆ.ಆ ಮೇಲೆ ಕೆಳಗೆ ಹಾಕಿ ಕಾಲುಗಳಿಂದ ಒದ್ದಿದ್ದಲ್ಲದೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.ಥಳಿತಕ್ಕೊಳಗಾದ ಇಬ್ಬರಲ್ಲಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೊಂದು ಗಂಭೀರ ವಿಷಯ ಏನೆಂದರೆ ಇಬ್ಬರನ್ನು ಕಿಡ್ನ್ಯಾಪ್ ಮಾಡಿ ಕ್ರಷ್ಣಾ ನದಿಗೆ ಎಸೆಯುವ ಪ್ಲ್ಯಾನ್ ಮಾಡಿದ್ದರಂತೆ.ಅವರ ಕಿಡ್ನ್ಯಾಪ್ ವಿಡಿಯೋ ವ್ಯೆರಲ್ ಆಗತಿದ್ದಂತೆ ಕ್ಯೆ ಬಿಟ್ಟಿದ್ದಾರೆ.ಈ ವಿಡಿಯೋ ವ್ಯೆರಲ್ ಆಗಿ ಮೂರು ದಿನದ ನಂತರ ಪೋಲೀಸರು ವಿಜಯ ರಾಠೋಡ್,ಬಸು ರೆಡ್ಡಿ ಮಲ್ಲಿಕಾರ್ಜುನ ಸೇರಿದಂತೆ ಏಳಿ ಜನರ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ.ದೂರು ದಾಖಲಾಗಿ ಎರಡು ದಿನ ಕಳೆಯುತ್ತಾ ಬಂದರೂ ಇನ್ನೂ ಯಾರೊಬ್ಬರನ್ನು ಆರೆಸ್ಟ ಮಾಡಿಲ್ವಂತೆ.
ಉದಯ ವಾರ್ತೆ ಯಾದಗಿರಿ