RCB ಫ್ರಾನ್ಸ್ ಗೆ ಭರ್ಜರಿ ಗುಡ್ ನ್ಯೂಸ್: ಸ್ಟಾರ್ ಬೌಲರ್‌ ಮೇಲೆ ಕಣ್ಣು ನೆಟ್ಟಿರುವ RCB?

Share to all

ಈ ಬಾರಿಯ ಮೆಗಾ ಹರಾಜು IPL ನ ಹೊಸ ಋತುವಿನ ಮೊದಲು ನಡೆಯಲಿದೆ. ಮೆಗಾ ಹರಾಜುಗಳು ಹೊಸ ಆಟಗಾರರ ಮೇಲೆ ದೊಡ್ಡ ಪ್ರಮಾಣದ ಹಣವನ್ನು ಸುರಿಯಬಹುದು. ಮುಂಬರುವ ಋತುವಿನಲ್ಲಿ, ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಉತ್ತಮ ಯುವ ಆಟಗಾರರನ್ನು ಸೇರಿಸಲು ನೋಡುತ್ತಿವೆ.2025 ರ ಐಪಿಎಲ್ ಗೆ ಎಲ್ಲಾ ಪ್ರಾಂಚೈಸಿಗಳು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಇನ್ನೂ ಇದೇ ವರ್ಷದ ಕೊನೆಯಲ್ಲಿ IPL ಮೆಗಾ ಹರಾಜು ನಡೆಯಲಿದ್ದು, ಸ್ಟಾರ್ ಆಟಗಾರರ ಮೇಲೆ RCB ಕಣ್ಣಿಟ್ಟಿದೆ.ಈ ಬಾರಿ ಶತಾಯ ಗತಾಯ ಕಪ್ ಗೆಲ್ಲಲೇಬೇಕು ಎನುತಿರುವ RCB ಪ್ರಮುಖ ಆಟಗಾರರ ಖರೀದಿಗೆ ಮುಂದಾಗುತ್ತಿದೆ ಎನ್ನಲಾಗಿದೆ.

ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿಯ ಹರಾಜಿನಲ್ಲಿ ಮೂವರು ಆಲ್​ರೌಂಡರ್​ಗಳನ್ನೇ ಟಾರ್ಗೆಟ್ ಮಾಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಗ್ಲೆನ್ ಫಿಲಿಪ್ಸ್ ಐಪಿಎಲ್ 2024ರಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಭಾಗವಾಗಿದ್ದರು. ಆದರೆ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಗಲಿಲ್ಲ. ಗ್ಲೆನ್ ಫಿಲಿಪ್ಸ್ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ಅಪಾಯಕಾರಿ ಬ್ಯಾಟ್ಸಮನ್. ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಾರೆ. ಜೊತೆಗೆ ಬೌಲಿಂಗ್​ ಮೂಲಕವೂ ತಂಡಕ್ಕೆ ಆಧಾರವಾಗಿರುತ್ತಾರೆ. ಇವರು ಆಫ್ ಸ್ಪಿನ್ ಬೌಲರ್. ಅಂತಹ ಪರಿಸ್ಥಿತಿಯಲ್ಲಿ ಫಿಲಿಪ್ಸ್ ಹರಾಜಿನ ಭಾಗವಾದರೆ RCB ಕೊಂಡುಕೊಳ್ಳುವುದು ಪಕ್ಕಾ.

ಅಶುತೋಷ್ ಶರ್ಮಾ 2024ರಲ್ಲಿ ಚೊಚ್ಚಲ ಐಪಿಎಲ್ ಟೂರ್ನಿ ಆಡಿದ್ದಾರೆ. ಪಂಜಾಬ್ ಕಿಂಗ್ಸ್ ಪರ ಅದ್ಭುತ ಪ್ರದರ್ಶನ ನೀಡಿ ಎಲ್ಲರ ಮನ ಗೆದ್ದಿದ್ದಾರೆ. 17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ 8ನೇ ಕ್ರಮಾಂಕದಲ್ಲಿ ಬಂದು ಒಂದು ಋತುವಿನಲ್ಲಿ 100 ಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ಆಟಗಾರ. ಐಪಿಎಲ್ 2024ರಲ್ಲಿ ಅಶುತೋಷ್ 11 ಪಂದ್ಯಗಳಲ್ಲಿ 167.26 ಸ್ಟ್ರೈಕ್ ರೇಟ್‌ನಲ್ಲಿ 189 ರನ್ ಗಳಿಸಿದ್ದಾರೆ. ಇವರು ಹರಾಜಿಗೆ ಹೋದರೆ RCB ಖರೀದಿಸಲು ಪ್ಲಾನ್ ಮಾಡಿಕೊಂಡಿದೆ.

ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಲಿವಿಂಗ್‌ಸ್ಟೋನ್ ಪಂಜಾಬ್ ಕಿಂಗ್ಸ್‌ನ ಭಾಗವಾಗಿದ್ದಾರೆ. ಲಿವಿಂಗ್‌ಸ್ಟೋನ್ ಬ್ಯಾಟಿಂಗ್, ಬೌಲಿಂಗ್​​ ಎರಡರಲ್ಲೂ ಚರಿತ್ರೆ ಸೃಷ್ಟಿಸಬಲ್ಲರು. ಕಳೆದ ಋತುವಿನಲ್ಲಿ ಅವರಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಐಪಿಎಲ್ 2024ರ 7 ಇನ್ನಿಂಗ್ಸ್‌ಗಳಲ್ಲಿ 22.20 ಸರಾಸರಿಯಲ್ಲಿ 111 ರನ್ ಗಳಿಸಿದರು. ಬೌಲಿಂಗ್​ನಲ್ಲಿ ಕೇವಲ 3 ವಿಕೆಟ್ ಪಡೆದರು. ಹೀಗಾಗಿ ಅವರನ್ನು ಪಂಜಾಬ್ ತಂಡ ರಿಲೀಸ್​ ಮಾಡಲಿದ್ದು, ಆರ್​​ಸಿಬಿ ಖರೀದಿ ಮಾಡಬಹುದು.


Share to all

You May Also Like

More From Author