ಮಂಡ್ಯ: ಮಳವಳ್ಳಿ ತಾಲೂಕಿನ ಹೊಳಲು ಗ್ರಾಮದ 25 ಮಹಿಳೆಯರು ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಆತ್ಮಹತ್ಯೆಗೆ ಮುಂದಾಗಿದ್ದಾರೆ. ತಮ್ಮ ಗ್ರಾಮದಲ್ಲಿರುವ ಗ್ರಾಪಂ ಕಚೇರಿಯ ಮುಂದೆ ನೇಣು ಹಾಕಿಕೊಂಡು ಸಾಯುವುದಾಗಿ ಪ್ರತಿಭಟನೆ ನಡೆಸಿದ್ದಾರೆ. ಆ ಎಲ್ಲಾ ಮಹಿಳೆಯರು ಗ್ರಾಪಂ ಮುಂದೆ ನಿರ್ಮಿಸಲಾಗಿರುವ ಶೀಟ್ ಗಳ ಚಪ್ಪರದ ಕಂಬಿಗಳಿಗೆ ಸೀರೆಗಳನ್ನು ಕಟ್ಟಿ, ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದಿಂದ ತಮ್ಮನ್ನು ಪಾರು ಮಾಡಬೇಕು. ಇಲ್ಲವಾದರೆ ನಾವೆಲ್ಲರೂ ಇಲ್ಲೇ ನೇಣು ಹಾಕಿಕೊಂಡು ಸಾಯುವುದಾಗಿ ಪ್ರತಿಭಟನೆ ನಡೆಸಿದ್ದಾರೆ.
ಎಲ್ಲಾ ಮಹಿಳೆಯರು, ಫೈನಾನ್ಸ್ ಕಂಪನಿಗಳಿಂದ ಸುಮಾರು 50 ರಿಂದ 1 ಲಕ್ಷ ರೂ ಸಾಲ ಪಡೆದಿದ್ದಾರೆ. ಹಣ ವಾಪಸ್ ತೀರಿಸಲು ಸಮಯ ಕೇಳಿದರೂ ಫೈನಾನ್ಸ್ ನವರು ಕಾಲಾವಕಾಶ ಕೊಡುತ್ತಿಲ್ಲ ಎಂದು ಆರೋಪಿಸಿ ಆತ್ಮಹತ್ಯೆ ನಿರ್ಧಾರ ಮಾಡಿದ್ದಾರೆ. ಸಾಲ ವಾಪಸ್ ಮಾಡಿ ಎಂದು ಫೈನಾನ್ಸ್ ಕಂಪನಿಗಳು ದುಂಬಾಲು ಬಿದ್ದಿದ್ದು, ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಮಹಿಳೆಯರು ಬೇಸತ್ತು ಈ ನಿರ್ಧಾರಕ್ಕೆ ಬಂದಿದ್ದಾರೆ.