ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಉದ್ಯೋಗಾವಕಾಶ: ವೇತನ ರೂ.75,000

Share to all

ಬೆಂಗಳೂರು: ತನ್ನಲ್ಲಿ ಖಾಲಿ ಇರುವ ಖಾಲಿ ಇರುವಂತ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತಿ ಹೊಂದಿರುವ, ಅರ್ಹ ಅಭ್ಯರ್ಥಿಗಳು ತಕ್ಷಣದಿಂದ ಆನ್​​ಲೈನ್​ ಮೂಲಕ ಅಪ್ಲೇ ಮಾಡಬಹುದು.

ಆರ್​​​ಡಿಡಬ್ಲುಎಸ್​​ಡಿ ಇಲಾಖೆಯಲ್ಲಿನ ಸಾಮಾಜಿಕ ಅಭಿವೃದ್ಧಿ ಸಲಹೆಗಾರ, ಕಾನೂನು ಸಲಹೆಗಾರರು, ಪರಿಸರ ಸಲಹೆಗಾರ ಹಾಗೂ ಮಾನಿಟರಿಂಗ್ ಮತ್ತು ಮೌಲ್ಯಮಾಪನ ಸಲಹೆಗಾರ ಸೇರಿ ವಿವಿಧ ಹುದ್ದೆಗಳನ್ನ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗುತ್ತಿದೆ.

ಹುದ್ದೆಗಳ ಹೆಸರು

ಸಾಮಾಜಿಕ ಅಭಿವೃದ್ಧಿ ಸಲಹೆಗಾರ

ಕಾನೂನು ಸಲಹೆಗಾರರು

ಮಾನಿಟರಿಂಗ್ ಮತ್ತು ಮೌಲ್ಯಮಾಪನ ಸಲಹೆಗಾರ

ಪರಿಸರ ಸಲಹೆಗಾರ ಸೇರಿ ವಿವಿಧ ಹುದ್ದೆಗಳು

ಒಟ್ಟು ಹುದ್ದೆಗಳು- 47

 

ವಯೋಮಿತಿ– 45 ವರ್ಷದ ಒಳಗಿನವರಿಗೆ ಅವಕಾಶ

 

ವಿದ್ಯಾರ್ಹತೆ

ಆಯಾಯ ಹುದ್ದೆಗಳಿಗೆ ಸಂಬಂಧಿಸಿದಂತೆ ಬೇರೆ ಬೇರೆ ವಿಭಾಗಳಲ್ಲಿ ಪದವಿಗಳನ್ನು ಪಡೆದಿರಬೇಕು.

ಬಿಸಿಎ, ಎಂಎಸ್​ಡಬ್ಲು, ಎಂಕಾಮ್, ಬಿಇ, ಬಿಸಿಎ, ಬಿಟೆಕ್, ಎಂಸಿಎ, ಎಂಎ ಇನ್ ಸೋಷಿಯಲಜಿ, ಎಂಬಿಎ-ಹೆಆರ್​ಎಂ,

ತಿಂಗಳ ಸಂಬಳ

50,000 ದಿಂದ 75,000 ರೂಪಾಯಿಗಳವರೆಗೆ ಇರುತ್ತದೆ.

ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಆಯ್ಕೆ ವಿಧಾನ ಹೇಗಿರುತ್ತದೆ..?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಮೊದಲು ಸಂದರ್ಶನ ಮಾಡಿ ದಾಖಲಾತಿ ಪರಿಶೀಲನೆ ಮಾಡಲಾಗುತ್ತದೆ. ಬಳಿಕ ಅಭ್ಯರ್ಥಿಗಳ ಲಿಸ್ಟ್ ಅನ್ನು ರಿಲೀಸ್ ಮಾಡಲಾಗುತ್ತದೆ.


Share to all

You May Also Like

More From Author