ಸುಪ್ರೀಂ ಕೋರ್ಟ್ʼಗೇ ಶಾಕ್ ಕೊಟ್ಟ ಹ್ಯಾಕರ್ಸ್! ಯೂಟ್ಯೂಬ್ ಹ್ಯಾಕ್ ಮಾಡಿ ಏನನ್ನು ಅಪ್ಲೋಡ್ ಮಾಡಿದ್ದಾರೆ ಗೊತ್ತಾ..?

Share to all

ನವದೆಹಲಿ:  ಸುಪ್ರೀಂ ಕೋರ್ಟ್ ವಿಚಾರಣೆಗಳನ್ನು ನೇರ ಪ್ರಸಾರ ಮಾಡುವ ಯೂಟ್ಯೂಬ್ ಚಾನೆಲ್ ಹ್ಯಾಕ್ ಆಗಿದೆ. ಖದೀಮರು ದೇಶದ ಸರ್ವೋಚ್ಚ ನ್ಯಾಯಾಲಯದ ಯೂಟ್ಯೂಬ್ ಚಾನೆಲ್ ಹ್ಯಾಕ್ ಮಾಡಿ ಇಲ್ಲಿ ಕ್ರಿಪ್ಟೋಕರೆನ್ಸಿ ಸೇರಿದಂತೆ ಇತರ ಪ್ರಮೋಶನ್ ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ.

ಈ ಮಾಹಿತಿ ತಿಳಿಯುತ್ತಿದ್ದಂತೆ ತಾಂತ್ರಿಕ ತಂಡ ಸುಪ್ರೀಂ ಕೋರ್ಟ್ ಯೂಟ್ಯೂಬ್ ಚಾನೆಲ್ ತಾತ್ಕಾಲಿಕ ಸ್ಥಗಿತಗೊಳಿಸಿ ಸರಿಪಡಿಸುವ ಕಾರ್ಯ ಆರಂಭಿಸಿದೆ.

‘ಬ್ರ್ಯಾಡ್‌ ಗಾರ್ಲಿಂಗ್‌ಹೌಸ್‌: ರಿಪ್ಲೆ ರೆಸ್ಪೋಂಡ್‌ ಟು ದಿ SEC’s 2 ಮಿಲಿಯನ್‌ ಡಾಲರ್‌ ಫೈನ್‌! XRP PRICE PREDICTION’ ಶೀರ್ಷಿಕೆಯೊಂದಿಗೆ ಖಾಲಿ ವೀಡಿಯೋ ಪ್ರಸ್ತುತ ಹ್ಯಾಕ್ ಮಾಡಿದ ಚಾನಲ್‌ನಲ್ಲಿ ಲೈವ್ ಆಗಿದೆ.

ಸಾಂವಿಧಾನಿಕ ಪೀಠಗಳ ಮುಂದೆ ಪಟ್ಟಿ ಮಾಡಲಾದ ಪ್ರಕರಣಗಳು ಮತ್ತು ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿರುವ ವಿಷಯಗಳ ನೇರ ವಿಚಾರಣೆಗಳನ್ನು ಸ್ಟ್ರೀಮ್ ಮಾಡಲು ಸುಪ್ರೀಂ ಕೋರ್ಟ್ YouTube ಅನ್ನು ಬಳಸುತ್ತಿದೆ.

ಸುಪ್ರೀಂ ಕೋರ್ಟ್ ತನ್ನ ಯೂಟ್ಯೂಬ್ ಚಾನೆಲ್ ಸುರಕ್ಷಿತಾವಾಗಿರಿಸಲು ಹಲವು ತಾಂತ್ರಿಕ ತಂಡಗಳು ಕೆಲಸ ಮಾಡುತ್ತಿದೆ. ಉತ್ತಮ ಟೆಕ್ನಿಕಲ್ ಸಪೋರ್ಟ್ ಇದ್ದರೂ ಇದೀಗ ಹ್ಯಾಕರ್ಸ್ ಯೂಟ್ಯೂಬ್ ಚಾನೆಲ್ ಹ್ಯಾಕ್ ಮಾಡಿದ್ದಾರೆ.ಹಲವು ಬಾರಿ ಪ್ರಮುಖ ಸರ್ಕಾರಿ ಸಂಸ್ಥೆಗಳ ಸಾಮಾಜಿಕ ಜಾಲತಾಣಗಳನ್ನೂ ಹ್ಯಾಕ್ ಮಾಡಿದ ಉದಾಹರಣೆಗಳಿವೆ.


Share to all

You May Also Like

More From Author