ಧಾರವಾಡ: ಚಂದ್ರಬಾಬು ನಾಯ್ಡು, ಪವನ ಕಲ್ಯಾಣ, ಮತಾಂತರ, ಇಸ್ಲಾಮೀಕರಣ ಶುದ್ಧೀಕರಣ ಮಾಡುತ್ತಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ. ನಗರದಲ್ಲಿ ಮಾತಾಣಡಿದ ಅವರು, ಚಂದ್ರಬಾಬು ನಾಯ್ಡು, ಪವನ ಕಲ್ಯಾಣ, ಮತಾಂತರ, ಇಸ್ಲಾಮೀಕರಣ ಶುದ್ಧೀಕರಣ ಮಾಡುತ್ತಿದ್ದಾರೆ.
ತಿರುಪತಿ ತಿಮ್ಮಪ್ಪನ ಕ್ಷೇತ್ರದಲ್ಲಾದ ಘೋರ ಅನ್ಯಾಯ ತೊಳೆಯುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಹಿಂದೂ ಸಮಾಜ ಬೆಂಬಲಕ್ಕೆ ನಿಲ್ಲಬೇಕು. ಇಡಿ ಕ್ಷೇತ್ರ ಗೋ ಮೂತ್ರದ ಮೂಲಕ ಶುದ್ಧೀಕರಣ ಆಗಬೇಕು. ಸಿಇಒ ಅಮಾನತು, ಇನ್ನಾರೋ ಮೇಲೆ ಕೇಸ್ ಹಾಕಿದರೆ ಸಾಲದು. ಇಡಿ ಕ್ಷೇತ್ರ ಗೋ ಮೂತ್ರದ ಮೂಲಕ ಶುದ್ಧೀಕರಣ ಆಗಬೇಕು ಎಂದಿದ್ದಾರೆ.
ಲಡ್ಡುವಿನಲ್ಲಿ ಶುದ್ಧವಾದ ತುಪ್ಪ ಬಳಸಿಲ್ಲ. ಗೋಮಾಂಸದ ಕೊಬ್ಬು, ಮೀನಿನ ಎಣ್ಣೆ ಉಪಯೋಗಿಸಿದ್ದಾರೆ ಎಂದು ಹಿಂದಿನ ಜಗನ್ ರೆಡ್ಡಿ ಸರ್ಕಾರದ ಮೇಲೆ ಆರೋಪ ಮಾಡಲಾಗಿದೆ. ಇದು ಸಣ್ಣ ಆರೋಪವಲ್ಲ. ಬಹಳ ಗಂಭೀರವಾದ ಆರೋಪ ಎಂದು ಹೇಳಿದ್ದಾರೆ.
ಗುಜರಾತ್ ಪ್ರಯೋಗಾಲಯದ ವರದಿ ಸಹ ಬಹಿರಂಗಪಡಿಸಿದ್ದಾರೆ. ಇದು ನೂರಕ್ಕೆ ನೂರು ಜಗನ್ ರೆಡ್ಡಿ ಅವಧಿಯ ಘೋರ ಅಪರಾಧ. ಅಕ್ಷಮ್ಯ ಅಪರಾಧ. ಇದನ್ನು ಹಿಂದೂ ಸಮುದಾಯ ಕ್ಷಮಿಸುವುದಿಲ್ಲ. ತಿರುಪತಿ ತಿಮ್ಮಪ್ಪ ಸಹ ಕ್ಷಮಿಸದ ಅಪರಾಧ ಜಗನ್ ರೆಡ್ಡಿ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.