ಪೊಲೀಸರು ಮದ್ಯ ನಾಶ ಮಾಡುವುದನ್ನು ಕಣ್ಣಾರೆ ಕಂಡ ಕುಡುಕನೊಬ್ಬ ಅಯ್ಯೋ ಎಣ್ಣೆ ಸುಮ್ನೆ ವೇಸ್ಟ್ ಆಯ್ತಲ್ಲಾ ಎಂದು ಹೊಟ್ಟೆ ಉರಿ ತಾಳಲಾರದೆ ಅಲ್ಲೇ ನೆಲದಲ್ಲಿ ಚೆಲ್ಲಿದ್ದ ಎಣ್ಣೆಯನ್ನು ನೆಕ್ಕಿ ಕುಡಿದಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ರಿತೇಶ್ ಪಾಲ್ ಎಂಬವರು ಈ ಕುರಿತ ವಿಡಿಯೋವನ್ನು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಹಂಚಿಕೊಂಡಿದ್ದು, “ಜಿವನದಲ್ಲಿ ಇಷ್ಟು ಸಮರ್ಪಣೆ ಇರ್ಬೇಕು ನೋಡಿ” ಎಂಬ ತಮಾಷೆಯ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಮದ್ಯ ನಾಶದ ಮೇಲೆ ಕುಡಕನೊಬ್ಬ ನೆಲದಲ್ಲಿ ಚೆಲ್ಲಿದ್ದ ಎಣ್ಣೆಯನ್ನು ನೆಕ್ಕುತ್ತಿರುವ ದೃಶ್ಯವನ್ನು ಕಾಣಬಹುದು. ಪೊಲೀಸರು ವಶಪಡಿಸಿಕೊಂಡ ಮದ್ಯವನ್ನು ಸಾಲಾಗಿ ಜೋಡಿಸಿ ಲ್ಡೋಝರ್ ಸಹಾಯದಿಂದ ಆ ಮದ್ಯದ ಬಾಟಲಿಗಳನ್ನು ನಾಶಪಡಿಸುತ್ತಿದ್ದ ವೇಳೆ ಅಲ್ಲಿಗೆ ಬಂದ ಕುಡುಕ ಮಹಾಶಯನೊಬ್ಬ ಅಯ್ಯೋ ದೇವ್ರೆ ಯಾಕಪ್ಪಾ ಇವ್ರು ಇಷ್ಟು ಎಣ್ಣೆಯನ್ನು ವೇಸ್ಟ್ ಮಾಡ್ತಿದ್ದಾರೆ ಎನ್ನುತ್ತಾ ಬಗ್ಗಿ ಕುಳಿತು ನೆಲದಲ್ಲಿ ಚೆಲ್ಲಿದ್ದ ಎಣ್ಣೆಯನ್ನೇ ನೆಕ್ಕಿ ಕುಡಿದಿದ್ದಾನೆ. ನಂತರ ಅಲ್ಲಿಗೆ ಬಂದ ಪೊಲೀಸರೊಬ್ಬರು ಆತನನ್ನು ಓಡಿಸಿದ್ದಾರೆ. ಸೆಪ್ಟೆಂಬರ್ 18 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ.