Israel Attack: ಹಿಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ಇಸ್ರೇಲ್ ದಾಳಿ: 21 ಮಕ್ಕಳು ಸೇರಿ 492 ಜನರ ಸಾವು

Share to all

ಲೆಬನಾನ್‌ನ ದಕ್ಷಿಣ ಹಾಗೂ ಪೂರ್ವ ಪ್ರಾಂತ್ಯದ ಮೇಲೆ ಇಸ್ರೇಲ್‌ ವಾಯುದಾಳಿಗೆ ಪ್ರತೀಕಾರವಾಗಿ ಉತ್ತರ ಇಸ್ರೇಲಿ ಸೇನಾ ನೆಲೆಗಳ ಮೇಲೆ ಲೆಬನಾನ್‌ ಪ್ರತಿ ದಾಳಿ ನಡೆಸಿದೆ. ಇತ್ತೀಚಿಗೆ ದೇಶದಲ್ಲಿ ನಡೆದ ಪೇಜರ್‌, ವಾಕಿಟಾಕಿ ಸ್ಫೋಟಕ್ಕೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದ ಇರಾನ್‌ ಬೆಂಬಲಿತ ಲೆಬನಾನ್‌ ಬಂಡುಕೋರ ಪಡೆಯ ಮೇಲೆ ಸೋಮವಾರ ಇಸ್ರೇಲ್‌ ಮಾರಣಾಂತಿಕ ದಾಳಿ ನಡೆಸಿದೆ. ಹಿಜ್ಜುಲ್ಲಾ ಉಗ್ರರ 800 ಸ್ಥಳಗಳ ಮೇಲೆ ಇಸ್ರೇಲ್ 200 ರಾಕೆಟ್‌ ದಾಳಿ ನಡೆಸಿದೆ. ಸಾವಿನ ಸಂಖ್ಯೆ 492ಕ್ಕೆ ಏರಿಕೆಯಾಗಿದ್ದು, ಗಾಯಗೊಂಡವರ ಸಂಖ್ಯೆ ಸುಮಾರು 1,500ಕ್ಕೆ ತಲುಪಿದೆ ಎಂದು ಲೆಬನಾನ್‌ ಆರೋಗ್ಯ ಸಚಿವಾಲಯ ಹೇಳಿಕೊಂಡಿರುವುದಾಗಿ ವರದಿಯಾಗಿದೆ.

ಇದು 2006ರಲ್ಲಿ ಇಸ್ರೇಲ್-ಹಿಜ್ಜುಲ್ಲಾ ಕದನ ಆರಂಭವಾದ ಬಳಿಕ 28 ವರ್ಷಗಳಲ್ಲೇ ದೇಶದ ಅತಿದೊಡ್ಡ ಕರಾಳ ದಿನ ಎಂದು ಲೆಬನಾನ್ ಉಲ್ಲೇಖಿಸಿದೆ. ಲೆಬನಾನ್‌ ದಕ್ಷಿಣ, ಪೂರ್ವ ಪ್ರಾಂತ್ಯಗಳ ಮೇಲೆ ದಾಳಿ ನಡೆಸಿದ ಇಸ್ರೇಲ್‌ ಉತ್ತರ ಭಾಗದ ಮೂರು ಸೇನಾ ನೆಲೆಗಳ ಮೇಲೆ ಬಂಡುಕೋರರ ಪ್ರತಿ ದಾಳಿ ನಡೆಸಿದ್ದಾರೆ. ಹೈಫಾದಲ್ಲಿರುವ ಇಸ್ರೇಲ್‌ ರಾಫೆಲ್‌ ಡಿಫೆನ್ಸ್‌ ಇಂಡಸ್ಟ್ರೀಸ್‌ ಸಂಕೀರ್ಣದ ಮೇಲೂ ಬಾಂಬ್‌ ದಾಳಿ ನಡೆಸಲಾಗಿದೆ ಎಂದು ಲೆಬನಾನ್‌ ಹೇಳಿಕೊಂಡಿದೆ.  ಇಲ್ಲಿಯವರೆಗೆ ಮೃತರ ಸಂಖ್ಯೆ ಸುಮಾರು 2006ಕ್ಕೆ ಏರಿಕೆ ಆಗಿದೆ ಎಂದು ವರದಿಯಾಗಿದೆ.

ಈ ದಾಳಿಯು ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಗುಡುಗಿರುವ ಇಸ್ರೇಲ್, ಹಿಜ್ಜುಲ್ಲಾ ಉಗ್ರರು ತಮ್ಮ ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟಿರುವ ಮನೆಗಳು ಮತ್ತು ಕಟ್ಟಡಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಲೆಬನಾನ್ ನಾಗರಿಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಹಮಾಸ್ ಮೇಲಿನ ಇಸ್ರೇಲ್ ಯುದ್ಧದಲ್ಲಿ ಹಿಜ್ಜುಲ್ಲಾ ಉಗ್ರರು, ಹಮಾಸ್‌ಗೆ ನೇರ ಬೆಂಬಲ ಘೋಷಿಸಿದ್ದಾರೆ.

ಅದರ ಭಾಗವಾಗಿ ಆಗಾಗ್ಗೆ ಇಸ್ರೇಲ್ ಸೇನಾ ನೆಲೆಗಳು ಮತ್ತು ನಾಗರಿಕ ಪ್ರದೇಶಗಳ ಮೇಲೆ ರಾಕೆಟ್, ಕ್ಷಿಪಣಿ ಬಳಸಿ ದಾಳಿ ನಡೆಸುತ್ತಿದೆ. ಇದರಿಂದ ಸಿಟ್ಟಿಗೆದ್ದಿರುವ ಇಸ್ರೇಲ್, ಕಳೆದೊಂದು ವಾರದಿಂದ ಲೆಬನಾನ್‌ನಲ್ಲಿರುವ ಹಿಜ್ಜುಲ್ಲಾ ಉಗ್ರರ ಮೇಲೆ ಹಲವು ರೀತಿಯಲ್ಲಿ ದಾಳಿ ನಡೆಸಿದೆ.

ಇತ್ತೀಚೆಗೆ ಇಸ್ರೇಲ್ ದೇಶವು ಲೆಬನಾನ್‌ನ ಹಿಜ್ಜುಲ್ಲಾ ಉಗ್ರರು ಹೊಂದಿದ್ದ ಪೇಜರ್ ಹಾಗೂ ವಾಕಿಟಾಕಿಗಳನ್ನು ಸ್ಫೋಟಿಸಿದ ನಂತರ ಸಂಘರ್ಷ ತೀವ್ರಗೊಂಡಿದೆ. ಇದು ಅನಿರ್ದಿಷ್ಟ ಯುದ್ಧಕ್ಕೆ ನಾಂದಿ ಹಾಡಿದೆ ಎಂದು ಹಿಜ್ಜುಲ್ಲಾ ಉಗ್ರರು ಘೋಷಿಸಿದ್ದಾರೆ.


Share to all

You May Also Like

More From Author