ವಿಚಿತ್ರ ಘಟನೆ: ಸತ್ತ ಅಂತ ಪೋಸ್ಟ್ ಮಾರ್ಟಮ್ʼಗೆ ಕರೆದೊಯ್ಯುವಾಗ ಎದ್ದು ಕುಳಿತ ವ್ಯಕ್ತಿ!

Share to all

ಬಿಹಾರ:- ಬಿಹಾರದಲ್ಲಿ ವಿಚಿತ್ರ ಘಟನೆ ಒಂದು ನಡೆದಿದ್ದು, ಸತ್ತ ಅಂತ ಪೋಸ್ಟ್​ಮಾರ್ಟಮ್​ಗೆ ಕರೆದೊಯ್ಯುವಾಗ ವ್ಯಕ್ತಿ ಎಚ್ಚರಗೊಂಡು ಸ್ಟ್ರೆಚರ್​ ಮೇಲೆ ಹತ್ತಿ ನಿಂತಿದ್ದಾನೆ. ಆಸ್ಪತ್ರೆಗೆ ಬಂದಾಗ ರಾಕೇಶ್ ಕುಮಾರ್ ಎನ್ನುವ ವ್ಯಕ್ತಿಯೊಬ್ಬರು ನೆಲದ ಮೇಲೆ ಬಿದ್ದಿರುವುದು ಕಂಡಿತ್ತು, ದೇಹದ ಚಲನೆ ಇರಲಿಲ್ಲ. ಅವರಿಗೆ ಹೃದಯಾಘಾತವಾಗಿರಬಹುದು ಎಂದು ಶಂಕಿಸಲಾಗಿತ್ತು ಎಂದು ನಗರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಬಯಾಸ್ ಪ್ರಸಾದ್ ಹೇಳಿದರು.

ನಾಡಿ ಮಿಡಿತವನ್ನೂ ನೋಡದೆ ವೈದ್ಯರು ಆತ ಸತ್ತಿದ್ದಾನೆಂದು ಘೋಷಿಸಿ, ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು. ಆ ಸಮಯದಲ್ಲಿ ಆತ ಎಚ್ಚರಗೊಂಡಿದ್ದು, ಬಳಿಕ ವಿಚಾರಣೆಗೆಂದು ಕರೆದೊಯ್ದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾತ್​ ರೂಂ ಕ್ಲೀನ್ ಮಾಡಲು ಹೋದಾಗ ಈ ವ್ಯಕ್ತಿ ಕ್ಲೀನರ್​ಗೆ ಸಿಕ್ಕಿದ್ದರು, ನಾನು ಔಷಧಿ ಖರೀದಿಸಲು ಹೋಗಿದ್ದೆ, ಏನೂ ತಿಂದಿರಲಿಲ್ಲ ಹಾಗಾಗಿ ತಲೆತಿರುಗಿ ಬಿದ್ದಿದ್ದೆ ಎಂದು ರಾಕೇಶ್​ ಹೇಳಿದ್ದಾರೆ.


Share to all

You May Also Like

More From Author