ಇಂದಿರಾ ಕ್ಯಾಂಟೀನ ಬೇಕೇ ಬೇಕು..ಬೇಡವೇ ಬೇಡಾ..ಎಲ್ಲದಕ್ಕೂ ತಿಲಾಂಜಲಿ ಇಟ್ಟ ಮಹಾನಗರ ಪಾಲಿಕೆ.. ಮಹಾನಗರ ಪಾಲಿಕೆಯಿಂದ ಮಹತ್ವದ ತೀರ್ಪು..ಇಂದಿರಾ ಕ್ಯಾಂಟೀನ್ ಸ್ಥಳಾಂತರಕ್ಕೆ ಆದೇಶ ನೀಡಿದ ಪಾಲಿಕೆ ಕಮೀಷನರ್ ಡಾ:ಈಶ್ವರ ಉಳ್ಳಾಗಡ್ಡಿ
ಇಂದಿರಾ ಕ್ಯಾಂಟೀನ ಬೇಕೇ ಬೇಕು..ಬೇಡವೇ ಬೇಡಾ..ಎಲ್ಲದಕ್ಕೂ ತಿಲಾಂಜಲಿ ಇಟ್ಟ ಮಹಾನಗರ ಪಾಲಿಕೆ.. ಮಹಾನಗರ ಪಾಲಿಕೆಯಿಂದ ಮಹತ್ವದ ತೀರ್ಪು..ಇಂದಿರಾ ಕ್ಯಾಂಟೀನ್ ಸ್ಥಳಾಂತರಕ್ಕೆ ಆದೇಶ ನೀಡಿದ ಪಾಲಿಕೆ ಕಮೀಷನರ್ ಡಾ:ಈಶ್ವರ ಉಳ್ಳಾಗಡ್ಡಿ..
ಹುಬ್ಬಳ್ಳಿ:- ಹುಬ್ಬಳ್ಳಿ ಮಹಾನಗರ ಪಾಲಿಕೆಯ ವಶದಲ್ಲಿರುವ ಹರಿಶ್ಚಂದ್ರ ಘಾಟ್ ನಲ್ಲಿ ನಿರ್ಮಾಣವಾಗುತ್ತಿದ್ದ ಇಂದಿರಾ ಕ್ಯಾಂಟೀನ್ ಬಗ್ಗೆ ಕಳೆದ ಒಂದು ವಾರದಿಂದ ಪರ ವಿರೋಧದ ಪ್ರತಿಭಟನೆಗಳು ನಡೆದಿದ್ದವು.ಅಲ್ಲದೇ ಇಂದಿರಾ ಕ್ಯಾಂಟೀನ್ ರಾಜಕೀಯ ತಿರುವು ಸಹ ಪಡೆದುಕೊಂಡಿತ್ತು.
ಕಳೆದ ಒಂದು ವಾರದ ಹಿಂದೆ ಪ್ರಮೋದ ಮುತಾಲಿಕ ಇಂದಿರಾ ಕ್ಯಾಂಟೀನ್ ನಿರ್ಮಾಣದ ಸ್ಥಳಕ್ಕೆ ಭೇಟಿ ನೀಡಿ ವಿರೋಧ ವ್ಯಕ್ತಪಡಿಸಿದ್ದರು.ಅಲ್ಲದೇ ಇಂದಿರಾ ಕ್ಯಾಂಟೀನ್ ತೆರವುಗೊಳಿಸಿ ಇಲ್ಲದೇ ಹೋದರೆ ನಾವೇ ತೆರವುಗೊಳಿಸಿವುದಾಗಿ ಡೆಡ್ ಲೈನ್ ಕೂಡಾ ಕೊಟ್ಟಿದ್ದರು.
ಈ ಮದ್ಯೆ ಶಾಸಕ ಪ್ರಸಾದ ಅಬ್ಬಯ್ಯ ಪತ್ರಿಕಾಗೋಷ್ಠಿ ನಡೆಸಿ ಜನರ ಆಶಯದಂತೆ ಅಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುತ್ತಿದ್ದೇವೆ.ಜನರು ಬೇಡಾ ಅಂದರೆ ತೆರವುಗೊಳಸುತ್ತೇವೆ ಅಂತಾ ಹೇಳಿಕೆ ಕೊಟ್ಟಿದ್ದರು.
ಈ ಮದ್ಯೆ ಮಂಟೂರ ಓಣಿಯ ಜನ ಮಹಾನಗರ ಪಾಲಿಕೆಯ ಮುಂದೆ ಪ್ರತಿಭಟನೆ ನಡೆಸಿ ಆ ಭಾಗದಲ್ಲಿ ಬಡ ಕುಟುಂಬಗಳೇ ಹೆಚ್ಚಾಗಿದ್ದು ನಮಗೆ ಇಂದಿರಾ ಕ್ಯಾಂಟೀನ್ ಬೇಕೆ ಬೇಕು ಎಂದು ಪ್ರತಿಭಟನೆ ನಡೆಸಿದ್ದರು.
ಇವೆಲ್ಲಾ ಪರ ವಿರೋಧಗಳನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ್ ಡಾ:ಈಶ್ವರ ಉಳ್ಳಾಗಡ್ಡಿ ಇಂದಿರಾ ಕ್ಯಾಂಟೀನ್ ಸ್ಥಳಾಂತರ ಮಾಡುವಂತೆ ಮಹತ್ವದ ತೀರ್ಪು ನೀಡಿದ್ದಾರೆ.