DDTP ಗೆ ಮೇಜರ್ ಸರ್ಜರಿ ಮಾಡಿದ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ – ಪಾಲಿಕೆಯ ಹೆಸರು ಹಾಳು ಮಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದ ಖಡಕ್ ಆಯುಕ್ತರು. -ಇದು ಉದಯ ವಾರ್ತೆಯ ಬಿಗ್ ಇಂಪ್ಯಾಕ್ಟ್…..

Share to all

 

ಹುಬ್ಬಳ್ಳಿ –

DDTP ಗೆ ಮೇಜರ್ ಸರ್ಜರಿ ಮಾಡಿದ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ – ಪಾಲಿಕೆಯ ಹೆಸರು ಹಾಳು ಮಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದ ಖಡಕ್ ಆಯುಕ್ತರು. -ಇದು ಉದಯ ವಾರ್ತೆಯ ಬಿಗ್ ಇಂಪ್ಯಾಕ್ಟ್

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಡಿಡಿಟಿಪಿ (ನಗರ ಯೋಜನೆ)ಇಲಾಖೆಗೆ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಮೇಜರ್ ಸರ್ಜರಿ ಮಾಡಿದ್ದಾರೆ.ಹೌದು ಇಲಾಖೆಯಲ್ಲಿ ಇದ್ದುಕೊಂಡು ಪಾಲಿಕೆಯ ಹೆಸರನ್ನು ಹಾಳು ಮಾಡುತ್ತಿದ್ದವರಿಗೆ ಖಡಕ್ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಬಿಸಿ ಮುಟ್ಟಿಸಿ ಮೇಜರ್ ಸರ್ಜರಿ

ಮಾಡಿದ್ದಾರೆ.

ಸರಿಯಾಗಿ ಕೆಲಸ ಮಾಡದವರಿಗೆ ವರ್ಗಾವಣೆ ಮಾಡುವ ಮೂಲಕ ಇನ್ನುಳಿದವರಿಗೆ ಎಚ್ಚರಿಕೆಯ ಸಂದೇಶದವನ್ನು ರವಾನೆ ಮಾಡಿದ್ದಾರೆ.ಇನ್ನೂ ಈ ಒಂದು ವಿಭಾಗದಲ್ಲಿನ ಕೆಲವೊಂದಿಷ್ಟು ವಿಚಾರಗಳ ಕುರಿತಂತೆ ಕಳೆದ ಒಂದು ತಿಂಗಳುಗಳಿಂದ ಉದಯ ವಾರ್ತೆ ಡಿಡಿಟಿಪಿಯಲ್ಲಿ ಬ್ರಹ್ಮಾಂಡ ಬ್ರಷ್ಟಾಚಾರ ನಡಿತಿರುವ ಬಗ್ಗೆ ಸರಣಿ ವರದಿ ಪ್ರಸಾರ ಮಾಡಿತ್ತು.ಉದಯ ವಾರ್ತೆಯ ಸುದ್ದಿಗೆ ಸ್ಪಂದಿಸಿದ ಪಾಲಿಕೆಯ ಆಯುಕ್ತರು ಡಿಡಿಟಿಪಿಯಲ್ಲಿ ಭಾಗ್ಯಶ್ರೀ ಎಂ.ಎನ್ ನಗರ ಯೋಜನಾಧಿಕಾರಿ.ಕು.ಲತಾ ರಾಣಿ.ಸಹಾಯಕ ನಗರ ಯೋಜನಾಧಿಕಾರಿ.ಬಸವಂತಿ ಪಾಟೀಲ.ಮಂಜುಳಾ ನಾಟೀಕರ ಸೇರಿದಂತೆ ಹಲವರನ್ನು ಇಲ್ಲಿಂದ ಎತ್ತಂಗಡಿ ಮಾಡಿ ಆದೇಶ ಹೊರಡಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಆಯುಕ್ತರಾಗಿ ಬಂದ ಡಾ ಈಶ್ವರ ಉಳ್ಳಾಗಡ್ಡಿ ಅವರು ಅಧಿಕಾರವಹಿಸಿ ಕೊಂಡ ನಾಲ್ಕು ತಿಂಗಳಲ್ಲಿಯೇ ಪಾಲಿಕೆಯಲ್ಲಿ ಮಹತ್ತರ ಬದಲಾವಣೆ ಮಾಡಿದ್ದಲ್ಲದೇ ಬ್ರಷ್ಟಾಚಾರದ ವಿಷಯ ಬಂದರೆ ಸಿಡಿಮಿಡಿಗೊಳ್ಳುವ ಆಯುಕ್ತರು ತಕ್ಷಣ ಸಭೆ ಕರೆದು ಮೊದಲ ಸಲ ವಾರ್ನಿಂಗ್.ಎರಡನೇ ಸಲ ಕ್ರಮ ಅಂತಾ ಸಾಬೀತು ಮಾಡಿದ್ದಾರೆ.ಈ ಡಿಡಿಟಿಪಿಯಲ್ಲೂ ಅಷ್ಟೇ ಒಂದ ಸಲ ಅಲ್ಲಾ ಎರಡ್ಮೂರು ಸಲ ವಾರ್ನಿಂಗ್ ಕೊಟ್ಟರೂ ಇದನ್ನು ಕೇಳದ ಹಿನ್ನೆಲೆಯಲ್ಲಿ ಈ ಒಂದು ದಿಟ್ಟವಾದ ಕ್ರಮವನ್ನು ಕೈಗೊಂಡು ಸರಿಯಾಗಿ ಕೆಲಸವನ್ನು ಮಾಡದ ಇನ್ನುಳಿದವರಿಗೆ ಖಡಕ್ ಸಂದೇಶವನ್ನು ನೀಡಿದ್ದಾರೆ.

ಇನ್ನೂ ಪ್ರಮುಖವಾಗಿ ಡಿಟಿಟಿಪಿ ಯಲ್ಲಿನ ಕರ್ಮಕಾಂಡ ಕುರಿತಂತೆ ಉದಯ ವಾರ್ತೆ ನಿರಂತರವಾಗಿ ವರದಿಯನ್ನು ಪ್ರಸಾರ ಮಾಡಿತ್ತು ಸಮಾಜಮುಖಿಯಾಗಿ ಕೆಲಸವನ್ನು ಮಾಡುತ್ತಿರುವ ಉದಯ ವಾರ್ತೆ ವರದಿ ಗೆ ಬಿಗ್ ಇಂಪ್ಯಾಕ್ಟ್ ಆಗಿದೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author