ರಜತ್ ಉಳ್ಳಾಗಡ್ಡಿಮಠಗೆ ಲೋಕಸಭೆ ಟಿಕೆಟ್ ನೀಡುವಂತೆ ಅರಸು ಅಪ್ತನ ಮನವಿ.

Share to all

ರಜತ್ ಉಳ್ಳಾಗಡ್ಡಿಮಠಗೆ ಲೋಕಸಭೆ ಟಿಕೆಟ್ ನೀಡುವಂತೆ ಅರಸು ಅಪ್ತನ ಮನವಿ

ಹುಬ್ಬಳ್ಳಿ : ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನ್ನು ಯುವ ಮುಖಂಡ ರಜತ ಉಳ್ಳಾಗಡ್ಡಿಮಠ ಅವರಿಗೆ ನೀಡಬೇಕು ಎಂದು ಹಿರಿಯ ನ್ಯಾಯವಾದಿ ಹಾಗೂ ದೇವರಾಜ್ ಅರಸ್ ಅವರ ಆಪ್ತ ರಾಗಿ ಕೆಲಸ ಮಾಡಿದ್ದ ಅಶೋಕ ಗೌರೋಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರಗೆ ಪತ್ರ ಬರೆದಿದ್ದಾರೆ.

ಹೌದು ಲೋಕಸಭಾ ಚುನಾವಣೆ ಇನ್ನೇನು ಐದಾರು ತಿಂಗಳಲ್ಲಿ ಬಂದೇ ಬಿಟ್ಟಿತು.ಆ ಹಿನ್ನೆಲೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಜಿಲ್ಲೆಯಲ್ಲಿಯೇ ಪಕ್ಷ ಸಂಘಟನೆಯಲ್ಲಿ ಮೇಲುಗೈ ಸಾಧಿಸಿರುವ ಸರಳ,ಸಜ್ಜನಿಕೆಯ ಮಾಸ್ ಯುವ ಮುಖಂಡನಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದರೆ ಖಂಡಿತಾ ಗೆಲವು ಸಾಧಿಸಲಿದ್ದಾರೆ ಎಂದು KSFC ನಿವೃತ್ತ ಕಾನೂನು ಹಿರಿಯ ಅಧಿಕಾರಿ ಅಶೋಕ.ಗೌರೋಜಿ ಧಾರವಾಡ ಲೋಕಸಭೆಯ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ಧಾರವಾಡ ಲೋಕಸಭೆಯ ಇತ್ತೀಚಿನ ವರದಿ ತರಿಸಿಕೊಳ್ಳಿ ನಿಮಗೆ ಗೊತ್ತಾಗುತ್ತೇ ಎಂದು ರಜತ ಉಳ್ಳಾಗಡ್ಡಿಮಠ ಅವರಿಗೆ ಟಿಕೆಟ್ ಕೊಟ್ಟರೆ ಗೆಲವು ಗ್ಯಾರಂಟಿ ಅಂತಾ ಪತ್ರ ಬರೆದಿದ್ದಾರೆ.

ಈ ಹಿಂದೆ ರಜತ ಉಳ್ಳಾಗಡ್ಡಿಮಠ ಅವರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಸಂಘಟನೆ ಮಾಡಿ ಟಿಕೆಟ್ ನ್ನು ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದ ಮಾಜಿ ಸಿಎಂ ಜಗದೀಶ.ಶೆಟ್ಟರ ಅವರಿಗೆ ಬಿಟ್ಟು ಕೊಟ್ಟು ತ್ಯಾಗಮಯಿ ರಜತ ಅಂತಾ ಕರೆಸಿಕೊಂಡಿದ್ದಾರೆ ಅಂತಲೂ ಪತ್ರದಲ್ಲಿ ಬರೆದಿದ್ದಾರೆ. ಒಂದು ವೇಳೆ ಧಾರವಾಡ ಲೋಕಸಭೆಗೆ ರಜತ ಅವರು ನಿರಾಕರಿಸಿದರೆ ಮಾಜಿ ಶಾಸಕಿ ಸೀಮಾ ಮಸೂತಿ ಅವರನ್ನ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ಅವರಿಗೆ ಲೋಕಸಭೆಯ ಟಿಕೆಟ್ ಕೊಡಿ ಎಂದು ಅಶೋಕ ಗೌರೋಜಿ ಪತ್ರ ಬರೆದಿದ್ದಾರೆ.

ಒಟ್ಟಿನಲ್ಲಿ ಧಾರವಾಡ ಲೋಕಸಭೆಗೆ ಕಾಂಗ್ರೆಸ್ ನಿಂದ ರಜತಗೆ ಟಿಕೆಟ್ ಅನ್ನುವ ಮಾತು ಎಲ್ಲೆಡೆ ಕೇಳಿಬರುತ್ತಿದೆ
ಅದರಲ್ಲಿ ಪ್ರಮುಖವಾಗಿ ವೀಕ್ಷಕರಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅಳಿಯ ರಜತ್ ಉಳ್ಳಾಗಡ್ಡಿ ಮಠ ಅವರ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದ್ದು ಇವರಿಗೆ ಟಿಕೆಟ್ ನೀಡಬೇಕು ಎಂದು ಕಾರ್ಯಕರ್ತರ ಮನವಿ ಕೂಡ ಆಗಿದೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author