ಗುವಾಹಟಿಯಲ್ಲಿ IED ಬಾಂಬ್ ಇಟ್ಟು ಬೆಂಗಳೂರಿಗೆ ಬಂದಿದ್ದ ಶಂಕಿತ ಉಗ್ರ ಅರೆಸ್ಟ್.!‌

Share to all

ಕಳೆದ ಆಗಸ್ಟ್.31 ರಂದು ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎನ್​ಐಎ ಅಧಿಕಾರಿಗಳು ಅಜೀಜ್ ಅಹ್ಮದ್ ಎಂಬ ಶಂಕಿತ ಉಗ್ರನನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೋರ್ವ ಶಂಕಿತ ಉಗ್ರನ ಬಂಧಿಸಲಾಗಿದೆ. ಬಂಧಿತ ಶಂಕಿತ ಉಗ್ರನನ್ನು ಗಿರಿಶ್ ಬೋರಾ ಅಲಿಯಾಸ್‌ ಗೌತಮ್ ಎಂದು ಗುರುತಿಸಲಾಗಿದೆ.

ಬೆಂಗಳೂರು ಗ್ರಾಮಾಂತರದ ಜಿಗಣಿಯಲ್ಲಿ ಶಂಕಿತ ಉಗ್ರನನ್ನು ಬಂಧಿಸಲಾಗಿದ್ದು, ಈತ ಉಲ್ಫಾ ಸಂಘನೆಗೆ ಸೇರಿದ್ದಾನೆ ಎಂದು ತಿಳಿದುಬಂದಿದೆ. ಗುವಾಹಟಿಯಲ್ಲಿ IED ಬಾಂಬ್ ಇಟ್ಟು ಬೆಂಗಳೂರಿಗೆ ಬಂದಿದ್ದ. ಫ್ಯಾಮಿಲಿ ಸಮೇತ ಬೆಂಗಳೂರಿಗೆ ಬಂದು ವಾಸ ಮಾಡುತ್ತಿದ್ದ. ಮಾತ್ರವಲ್ಲ  ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿಯಾಗಿ ಕೆಲಸಕ್ಕೆ ಸೇರಿದ್ದ.
ಗೌತಮ್ ಎನ್ನುವ ಹೆಸರಲ್ಲಿ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದ.

ಈ ಬಗ್ಗೆ  ಪಕ್ಕಾ ಮಾಹಿತಿ ಆಧರಿಸಿ ಶಂಕಿತ ಉಗ್ರನನ್ನು ಅಸ್ಸಾಂ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಕಳೆದ ಆಗಷ್ಟ್ ನಲ್ಲಿ ಗುವಾಹಟಿಯಲ್ಲಿ ಬಾಂಬ್ ಇಟ್ಟಿದ್ದ. ಸುಮಾರು ಐದು IED ಬಾಂಬ್ ಗಳನ್ನ ಇಟ್ಟು ಬೆಂಗಳೂರಿನ ಜಿಗಣಿಗೆ ಬಂದು ವಾಸವಿದ್ದ. ಇಲ್ಲಿಯೂ ಒಂದಷ್ಟು ಪ್ಲಾನ್ ಗಳನ್ನ ನಡೆಸ್ತಿದ್ದ ಎಂದು ಶಂಕೆ ಇದೆ. ಬಂಧಿತನಿಂದ ಮೊಬೈಲ್ ಮತ್ತು ಒಂದಷ್ಟು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಇದೀಗ ಆತನನ್ನು ಎನ್ಐಎ ತಂಡ ಅಸ್ಸಾಂಗೆ ಕರೆದೊಯ್ದಿದೆ.


Share to all

You May Also Like

More From Author