ಹುಬ್ಬಳ್ಳಿ:- ಛೋಟಾ ಮುಂಬೈ ಖ್ಯಾತಿಯ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪುರುಷರು ಬೈಕ್ ಕಳ್ಳತನ ಮಾಡೋದನ್ನ ಕೇಳಿದ್ದೇವೆ.ಆದರೆ ಬೈಕ್ ಕಳ್ಳತನ ಮಾಡೋ ಮಹಿಳೆಯರನ್ನು ಈವರೆಗೂ ನೋಡಿಯೂ ಇಲ್ಲಾ..ಕೇಳಿಯೂ ಇಲ್ಲಾ.ಆದರೆ ಈಗ ಹುಬ್ಬಳ್ಳಿಯ ವಿದ್ಯಾನಗರ ಪೋಲೀಸರು ಬೈಕ್ ಕಳ್ಳತನ ಮಾಡುತ್ತಿದ್ದ ಖತರನಾಕ್ ಲೇಡಿ ಕಳ್ಳಿಯನ್ನು ಆರೆಸ್ಟ್ ಮಾಡಿದ್ದಾರೆ.
ಹುಬ್ಬಳ್ಳಿ ಮೂಲದ ಮೂವತ್ತೈದು ವರ್ಷದ ರೇಷ್ಮಾ ಹಾಗೂ ಆಕೆಯ ಜೊತೆಗಾರ ರವಿ ಎಂಬಾತ ಸೇರಿದಂತೆ ಮೂವರನ್ನು ವಿದ್ಯಾನಗರ ಪೋಲೀಸರು ಆರೆಸ್ಟ್ ಮಾಡಿದ್ದಾರೆ.
ಎಪ್ಪತ್ತು ಎಂಬತ್ತು ಸಾವಿರದ ಸ್ಕೂಟಿಗಳನ್ನು ಕದ್ದು ಪರಿಚಯಸ್ಥರಿಗೆ ಹತ್ತೋ ಇಪ್ಪತ್ತೋ ಸಾವಿರಕ್ಕೆ ಮಾರಾಟ ಮಾಡುತ್ತಿದ್ದಳು ಎನ್ನಲಾಗಿದೆ.ಕಳ್ಳಿಯ ಮಾಹಿತಿ ಪಡೆದ ವಿದ್ಯಾನಗರ ಪೋಲೀಸರು ಆಕೆಯನ್ನು ಹೆಡಮುರಿ ಕಟ್ಟಿದ್ದು ಅಲ್ಲದೇ ಸದ್ಯಕ್ಕೆ ಹನ್ನೆರಡು ಬೈಕಗಳನ್ನು ವಶಪಡಿಸಿಕೊಂಡಿದ್ದಾರೆ.