ಪ್ರತಿಷ್ಠಿತ ರಾಯಲ್ ರಿಡ್ಜ್ ಹೊಟೆಲ್ ಮೇಲೆ ಎಪ್ಆಯ್ ಆರ್ ದಾಖಲು..ಡೀಲ್ ಎನ್ನುವ ಧರಿದ್ರ ಜನರಿಗೆ ಉತ್ತರ ಕೊಟ್ಟ ಕಮೀಷನರ್ ಎನ್ ಶಶಿಕುಮರ್ ..
ಹುಬ್ಬಳ್ಳಿ: ಪ್ರತಿಷ್ಠಿತ ಹೊಟೇಲ್ ಎಂದೇ ಪ್ರಸಿದ್ಧಿ ಪಡೆದಿರುವ ರಾಯಲ್ ರಿಡ್ಜ್ ಹೊಟೇಲ್ ಮೇಲೆ ಪ್ರಕರಣ ದಾಖಲು ಮಾಡಿ, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ ಇದು ಉದಯ ನ್ಯೂಸ್ ಕನ್ನಡದ ಬಿಗ್ ಇಂಪ್ಯಾಕ್ಟ್ ಸ್ಡೋರಿ.
ಕಳೆದ ಶನಿವಾರ ನಡೆದ ದಾಳಿಯ ಮುನ್ನಾ ಉದಯ ವಾರ್ತೆ ನ್ಯೂಸ್ ಕನ್ನಡ ಕತ್ತಲ ಲೋಕದಲ್ಲಿ ನಶಾ ಲೋಕ ಎಂಬ ಶಿರ್ಷಿಕೆಯಡಿ ವರದಿ ಪ್ರಸಾರ ಮಾಡಿತ್ತು..
ವರದಿ ಪ್ರಸಾರದ ಬೆನ್ನಲ್ಲೇ ಶನಿವಾರ ರಾತ್ರಿ ದಿಡೀರ ದಾಳಿ ಮಾಡಿದ ಪೋಲೀಸರುವ ಹೊಟೆಲ್ ನ ಡಿವಿಆರ್ ವಶಪಡಿಸಿಕೊಂಡು ತನಿಖೆ ನಡೆಸಿದ್ದರು.
ನಂತರ ಕಾನೂನು ಬಾಹಿರವಾಗಿ ನಡೆದುಕೊಂಡಿದ್ದು, ತನಿಖೆಯಲ್ಲಿ ಗೊತ್ತಾಗಿ ಪ್ರಕರಣ ದಾಖಲಾಗಿದೆ ಎಂದು ಪೋಲೀಸ ಕಮೀಷನರ್ ಎನ್.ಶಶಿಕುಮಾರ ಹೇಳಿದ್ದಾರೆ.
ಸ್ಥಳೀಯ ಜನರು ಕೂಡಾ ಇಲ್ಲಿನ ಶಬ್ಧ ಮತ್ತು ಕುಡಿದು ವಾಹನ ಚಲಾಯಿಸಿರುವ ಕುರಿತು ಮಾಹಿತಿ ನೀಡಿದ್ದಾರೆಂದು ಹೇಳಿದ ಕಮೀಷನರ್, ತನಿಖೆಯನ್ನ ಮುಂದುವರೆಸಲಾಗಿದೆ ಎಂದರು.
ಪೋಲೀಸ ಕಮೀಷನರ್ ಕೆಲಸವನ್ನ ಪೋಲೀಸ ಕಮೀಷನರ್ ಮಾಡಿದ್ದಾಯ್ತು….ಇನ್ನೇನಿದ್ದರೂ ಅಬಕಾರಿ ಇಲಾಖೆಯವರ ಕೆಲಸ..ಅಬಕಾರಿ ಡಿಸಿ ಅವರೇ ನಿಮ್ಮದೇನು ಕಥೆ ಅಂತಾ ಜನರು ಕೇಳುವ ಮೊದಲೇ ನಿಮ್ಮ ಕ್ರಮ ಆಗುತ್ತಾ ಕಾದು ನೋಡಬೇಕಾಗಿದೆ.