ಅಮಾನವೀಯ ಘಟನೆ: ಜೀವಂತ ಗಂಡು ಮಗುವನ್ನ ಮಣ್ಣಿನಲ್ಲಿ ಹೂತು ಹಾಕಿದ ಪಾಪಿಗಳು!

Share to all

ಬೆಂಗಳೂರು: ಬಂಜೆತನದ ಸಮಸ್ಯೆ ಇರುವ ಎಷ್ಟೊ ದಂಪತಿಗಳಿದ್ದಾರೆ, ಅವರಿಗೆ ನಮಗೊಂದು ಮಗು ಬೇಕೆಂಬ ದೊಡ್ಡ ಕನಸಿರುತ್ತದೆ, ಆದರೆ ಯಾವುದೋ ಕಾರಣದಿಂದ ಮಗು ಆಗಿರಲ್ಲ. ಆದರೆ ಮಗು ಇಲ್ಲ ಎಂಬ ನೋವಿಗಿಂತ ಜನರ ಕೊಂಡು ಮಾತು ಅವರನ್ನು ನೋಯಿಸುತ್ತದೆ. ಆದ್ರೆ ಇಲ್ಲೋಬ್ಬ ತಾಯಿಗೆ ಮಗುವೇ ಬೇಡವಾಯ್ತು ಅನ್ನೋ ಅನುಮಾನ ಕಾಡತೊಡಗಿದೆ.

ಹೌದು ನಿರ್ಜನ ಪ್ರದೇಶದಲ್ಲಿ ನವಜಾತ ಶಿಶುವನ್ನು ಜೀವಂತವಾಗಿ ಹೂತು ಹಾಕಿದ ಘಟನೆ ಆನೇಕಲ್ ತಾಲೂಕಿನ ಕತ್ರಿಗುಪ್ಪೆ ದಿಣ್ಣೆ ಗ್ರಾಮದಲ್ಲಿ ನಡೆದಿದೆ. ಸ್ಥಳೀಯರು ಬಹಿರ್ದೆಸೆಗೆ ಹೋದಾಗ ಮಗುವಿನ ಚೀರಾಟ ಕೇಳಿ, ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಗುವನ್ನು ರಕ್ಷಿಸಿದ್ದಾರೆ.

ನಂತರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮಕ್ಕಳ ರಕ್ಷಣಾಧಿಕಾರಿ ಹೆಚ್.ಕೆ.ಆಶಾ ತಂಡ ಮಗುವನ್ನು ಸಂರಕ್ಷಿಸಿದ್ದಾರೆ. ದೊಮ್ಮಸಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿಗೆ ಸಣ್ಣಪುಣ್ಣ ಗಾಯಗಳಾಗಿದ್ದು, ಚೇತರಿಸಿಕೊಳ್ಳುತ್ತಿದೆ. ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ ನಡೆದಿದೆ.


Share to all

You May Also Like

More From Author