ಅಥಣಿ : ನೀವೇನಾದರೂ ATM ನಿಂದ ಹಣ ತೆಗೆಯಲು ಹೋದ್ರೆ ಎಚ್ಚರ, ಯಾಕಂದ್ರೆ ನಿಮ್ಮ ಕಣ್ಮುಂದೆನೆ ನಿಮ್ಮ ಹಣ ಕಿತ್ತುಕೊಳ್ಳುವ ಖತರ್ನಾಕ್ ಕಳ್ಳರು ನಿಮ್ಮ ಪಕ್ಕದಲ್ಲೇ ಇರ್ತಾರೆ. ಹೌದು,, ನಾವು ಹೇಳೋ ಹಾಗೆ ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ಪ್ರಕರಣಒಂದು ಬೆಳಕಿಗೆ ಬಂದಿದೆ. ತಾಲೂಕಿನ ಜಂಬಗಿ ಮೂಲದ ತಾನಾಜಿ ಸಾಳುಂಕೆ ಎಂಬ ಯುವಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಎದುರೂ ಕರ್ನಾಟಕ ಬ್ಯಾಂಕ್ ನ ATM ನಲ್ಲಿ ಹಣ ತೆಗೆಯಲು ಹೋಗಿರ್ತಾನೆ
ಪಕ್ಕದಲ್ಲೇ ನಿಂತ ವ್ಯಕ್ತಿಯೊಬ್ಬ ಆತನನ್ನ ಪುಸಲಾಯಿಸಿ ಆತನ ATM ಲಪಟಾಯಿಸಿ ಆತನ ಅಕೌಂಟ್ ನಿಂದ 15 ಸಾವಿರ ಹಣ ತೆಗೆದು ಪರಾರಿಯಾಗಿದ್ದಾನೆ. ಈ ಸಂಭಂದ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳ್ಳನನ್ನ ಸೆರೆ ಹಿಡಿದು ನ್ಯಾಯ ಕೊಡಿಸುವಂತೆ ಹಣ ಕಳೆದುಕೊಂಡ ಯುವಕ ಮನವಿ ಮಾಡಿದ್ದಾನೆ.