ಉತ್ತರ ಪ್ರದೇಶ:- ಇಲ್ಲಿನ ರಾಜಧಾನಿ ಲಕ್ನೋನಲ್ಲಿ ಆಘಾತಕಾರಿ ಘಟನೆ ಜರುಗಿದೆ. ಐಫೋನ್ ಡೆಲಿವರಿ ಮಾಡಲು ಬಂದಿದ್ದ ಏಜೆಂಟ್ ಭರತ್ ಎಂಬುವವರನ್ನು ಗಜಾನನ ಎಂಬಾತ ಸಹಚರರ ಜತೆ ಸೇರಿ ಹತ್ಯೆ ಮಾಡಿದ್ದಾರೆ.
ವ್ಯಕ್ತಿ ಫ್ಲಿಪ್ಕಾರ್ಟ್ ಮೂಲಕ 1.5 ಲಕ್ಷ ರೂಪಾಯಿ ಬೆಲೆ ಬಾಳುವ ಐಫೋನ್ನ್ನು ಕ್ಯಾಶ್ ಆನ್ ಡೆಲಿವರಿಯಲ್ಲಿ ಆರ್ಡರ್ ಮಾಡಿದ್ದ
ಸೆಪ್ಟೆಂಬರ್ 23 ರಂದು ನಿಶಾತ್ಗಂಜ್ ನಿವಾಸಿಯಾದ ಡೆಲಿವರಿ ಬಾಯ್ ಭರತ್ ಸಾಹು ಫೋನ್ ಡೆಲಿವರಿ ಮಾಡಲು ಅವರ ಮನೆಗೆ ಹೋಗಿದ್ದರು. ಅಲ್ಲಿ ಗಜಾನನ ಮತ್ತು ಅವನ ಸಹಚರರು ಅವರನ್ನು ಕೊಲೆ ಮಾಡಿದ್ದಾರೆ. ಸಾಹುವನ್ನು ಕತ್ತು ಹಿಸುಕಿ ಕೊಲೆ ಮಾಡಿದ ಬಳಿಕ ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿ ಇಂದಿರಾ ಕಾಲುವೆಗೆ ಎಸೆದಿದ್ದಾರೆ.
ಎರಡು ದಿನಗಳ ಕಾಲ ಸಾಹು ಮನೆಗೆ ಬಾರದಿದ್ದಾಗ, ಆತನ ಕುಟುಂಬದವರು ಸೆಪ್ಟೆಂಬರ್ 25 ರಂದು ಚಿನ್ಹಾಟ್ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಸಾಹುವಿನ ಕಾಲ್ ಡಿಟೇಲ್ಸ್ ಸ್ಕ್ಯಾನ್ ಮಾಡಿ ಆತನ ಲೊಕೇಶನ್ ಹುಡುಕಿ ಪೊಲೀಸರು ಗಜಾನನ ನಂಬರ್ ಪತ್ತೆ ಮಾಡಿ ಆತನ ಸ್ನೇಹಿತ ಆಕಾಶ್ನನ್ನು ತಲುಪಿದ್ದಾರೆ.
ವಿಚಾರಣೆ ವೇಳೆ ಆಕಾಶ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ಅಧಿಕಾರಿ ತಿಳಿಸಿದ್ದಾರೆ. ಹತ್ಯೆಯ ನಂತರ ಆಕಾಶ್ ಕೂಡ ಮುಂಬೈಗೆ ಪರಾರಿಯಾಗಿದ್ದ. ಆದರೆ, ಪೊಲೀಸರಿಗೆ ಇನ್ನೂ ಶವ ಪತ್ತೆಯಾಗಿಲ್ಲ. ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡವು ಕಾಲುವೆಯಲ್ಲಿ ದೇಹವನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ.