ಕರ್ತವ್ಯ ಲೋಪ: ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ದವೇ FIR ದಾಖಲು, ಕಾರಣ ಇಲ್ಲಿದೆ!?

Share to all

ಬೆಂಗಳೂರು:– ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ದವೇ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಈ ಹಿಂದೆ ಜೆ.ಪಿ.ನಗರ ಠಾಣೆಯಲ್ಲಿಯೇ ಇನ್ಸ್ ಪೆಕ್ಟರ್ ಆಗಿದ್ದ ಹಿತೇಂದ್ರ, ಕೆಲ ಪ್ರಕರಣಗಲಲ್ಲಿ ವಶಪಡಿಸಿಕೊಂಡಿದ್ದ ಮಾಲನ್ನು ವಾಪಾಸ್ ನೀಡದೇ ದುರುಪಯೋಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಸದ್ಯ ಜೆಪಿ ನಗರ ಪೊಲೀಸ್ ಠಾಣೆಯ ಮಾಜಿ ಇನ್ಸ್ಪೆಕ್ಟರ್ ವಿರುದ್ದ ಹಾಲಿ ಇನ್ಸ್ಪೆಕ್ಟರ್ ರಾಧಾಕೃಷ್ಣ ಎಫ್​ಐಆರ್ ದಾಖಲಿಸಿದ್ದಾರೆ.

ಈ ಹಿಂದೆ ಜೆ.ಪಿ.ನಗರ ಠಾಣೆಯಲ್ಲಿಯೇ ಇನ್ಸ್ ಪೆಕ್ಟರ್ ಆಗಿದ್ದ ಹಿತೇಂದ್ರ, ಕೆಲ ಪ್ರಕರಣಗಲಲ್ಲಿ ವಶಪಡಿಸಿಕೊಂಡಿದ್ದ ಮಾಲನ್ನು ವಾಪಾಸ್ ನೀಡಿರಲಿಲ್ಲ. ಅಲ್ಲದೇ ಹಿಂದಿನ ಇನ್ಸ್ ಪೆಕ್ಟರ್ ಹಸ್ತಾಂತರಿಸಿದ್ದ ಮಾಲು ಸಹ ಠಾಣೆಗೆ ಹಾಜರುಪಡಿಸಿರಲಿಲ್ಲ. ವಶಪಡೆದ ಮಾಲನ್ನು ಹಿಂತಿರುಗಿಸುವ ಬಗ್ಗೆ ಹಲವಾರು ಬಾರಿ ಹೇಳಲಾಗಿತ್ತು. ಅಲ್ಲದೇ ಈ ಬಗ್ಗೆ ದಕ್ಷಿಣ ವಿಭಾಗದ ಡಿಸಿಪಿ ಜ್ಞಾಪನಾ ಪತ್ರ ನೀಡಿದರೂ ಉತ್ತರಿಸಿರಲಿಲ್ಲ. ಹೀಗಾಗಿ ಪ್ರಕರಣಗಳ ಮಾಲನ್ನ ಹಿಂತಿರುಗಿಸದೆ ದುರುಪಯೋಗಿಸಿಕೊಂಡಿರೋದು ಬೆಳಕಿಗೆ ಬಂದಿದೆ.


Share to all

You May Also Like

More From Author