Mahalaya Amavasya: ಇಂದು “ಮಹಾಲಯ ಅಮವಾಸ್ಯೆ”: ಈ ಕೆಲಸಗಳನ್ನು ಅಪ್ಪಿ ತಪ್ಪಿಯೂ ಮಾಡಬೇಡಿ!

Share to all

ಹಿಂದೂ ಸಂಪ್ರದಾಯದಲ್ಲಿ ಮಹಾಲಯ ಅಮವಾಸ್ಯೆ, ಸರ್ವಪಿತೃ ಅಮಾವಾಸ್ಯೆ, ಪಿತ್ರ ಮೋಕ್ಷ ಅಮಾವಾಸ್ಯೆ ಅಥವಾ ಪಿತೃ ಅಮಾವಾಸ್ಯೆ ಎಂದೂ ಕರೆಯಲ್ಪಡುವ ಈ ವಿಶೇಷ ದಿನವನ್ನು ‘ಪಿತೃಗಳು’ ಅಥವಾ ಪೂರ್ವಜರಿಗೆ ಸಮರ್ಪಿತವಾದ ದಿನವಾಗಿದೆ. ದಕ್ಷಿಣ ಭಾರತದಲ್ಲಿ ಈ ದಿನವನ್ನು ‘ಭಾದ್ರಪದ’ ಮಾಸದ ಅಮವಾಸ್ಯೆಯಂದು (ಅಮಾವಾಸ್ಯೆಯ ದಿನ) ಆಚರಿಸಲಾಗುತ್ತದೆ. ಈ ದಿನ ಪೂರ್ವಜರಿಗೆ ಪೂಜೆ ಮಾಡಿದರೆ ಅವರಿಗೆ ಮೋಕ್ಷ ಸಿಗುತ್ತದೆ ಹಾಗೂ ನಮಗೆ ಅವರ ಆಶೀರ್ವಾದ ಇರುತ್ತದೆ ಎಂಬ ನಂಬಿಕೆ ಇದೆ.

ಸನಾತನ ಧರ್ಮದಲ್ಲಿ ಅಮಾವಾಸ್ಯೆಯ ತಿಥಿಗೆ ವಿಶೇಷ ಮಹತ್ವವಿದೆ. ಶಾಸ್ತ್ರದಲ್ಲಿ ಅಮಾವಾಸ್ಯೆ ತಿಥಿಯಂದು ಪೂರ್ವಜರಿಗೆ ನೈವೇದ್ಯ ಅರ್ಪಿಸುವುದು ವಿಶೇಷ. ಇನ್ನು ಪೂರ್ವಜರಿಗೆ ಅನ್ನಸಂತರ್ಪಣವನ್ನು ಅರ್ಪಿಸಿ, ವಿವಿಧ ಬಗೆಯ ಖಾದ್ಯಗಳನ್ನು ಮಾಡಿ ಸಂತೃಪ್ತಿಪಡಿಸುತ್ತಾರೆ. ಅಲ್ಲದೇ ಮಹಾಲಯ ಅಮಾವಾಸ್ಯೆಯಂದು ಅನ್ನ ತಯಾರಿಸಿ ಕಾಗೆ, ಹಸು, ನಾಯಿಗಳಿಗೆ ಅರ್ಪಿಸಿ, ಬ್ರಾಹ್ಮಣರಿಗೆ ಆಹಾರ ಪದಾರ್ಥಗಳನ್ನು ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ.

ಮಹಾಲಯ ಅಮಾವಾಸ್ಯೆ ವಿಶೇಷವಾಗಿದೆ.. ಅಂದರೆ ನಮ್ಮ ಹೆತ್ತವರು, ಪೂರ್ವಜರಿಗೆ ಒಮ್ಮೆಯೂ 70, 80, 100 ವರ್ಷಗಳವರೆಗೆ ಶ್ರಾದ್ಧ, ತರ್ಪಣ ಕೊಡದವರು ಸಹ ಈ ಮಹಾಲಯ ಅಮಾವಾಸ್ಯೆ ದಿನಗಳಲ್ಲಿ ಶ್ರಾದ್ಧ, ತರ್ಪಣ ಕೊಟ್ಟರೆ ಅವರಿಗೆ ಆತ್ಮಶಾಂತಿ ಸಿಗುತ್ತದೆ. ಈ ಅಮಾವಾಸ್ಯೆ ದಿನಗಳಲ್ಲಿ ಬಡವರಿಗೆ ಆಹಾರ ನೀಡಬೇಕು. ಬಡ, ನಿರ್ಗತಿಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಬೇಕು. ಅರ್ಚಕರಿಗೆ ಬಟ್ಟೆಗಳನ್ನು ಖರೀದಿಸಿ ಕೊಡಬೇಕು.

ಮಹಾಲಯ ಅಮವಾಸ್ಯೆಯ ಮಹತ್ವವೇನು ?

ಸನಾತನ ಧರ್ಮದಲ್ಲಿ ಅಮಾವಾಸ್ಯೆಯ ತಿಥಿಗೆ ವಿಶೇಷ ಮಹತ್ವವಿದೆ. ಶಾಸ್ತ್ರದಲ್ಲಿ ಅಮಾವಾಸ್ಯೆ ತಿಥಿಯಂದು ಪೂರ್ವಜರಿಗೆ ನೈವೇದ್ಯ ಅರ್ಪಿಸುವುದು ವಿಶೇಷ. ಇನ್ನು ಪೂರ್ವಜರಿಗೆ ಅನ್ನಸಂತರ್ಪಣವನ್ನು ಅರ್ಪಿಸಿ, ವಿವಿಧ ಬಗೆಯ ಖಾದ್ಯಗಳನ್ನು ಮಾಡಿ ಸಂತೃಪ್ತಿಪಡಿಸುತ್ತಾರೆ. ಅಲ್ಲದೇ ಮಹಾಲಯ ಅಮಾವಾಸ್ಯೆಯಂದು ಅನ್ನ ತಯಾರಿಸಿ ಕಾಗೆ, ಹಸು, ನಾಯಿಗಳಿಗೆ ಅರ್ಪಿಸಿ, ಬ್ರಾಹ್ಮಣರಿಗೆ ಆಹಾರ ಪದಾರ್ಥಗಳನ್ನು ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ.

ಪಿತೃ ಪಕ್ಷದ ದಿನದಂದು ಏನು ಮಾಡಬಾರದು:

  • ಮದ್ಯಪಾನ, ಮಾಂಸಾಹಾರ, ಕಪ್ಪು ಉಪ್ಪು, ಬೆಳ್ಳುಳ್ಳಿ, ಈರುಳ್ಳಿ ಸೇವಿಸುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು.
  • ಐಷಾರಾಮಿ ವಸ್ತುಗಳನ್ನು ಖರೀದಿಸಬಾರದು. ಯಾವುದೇ ಶುಭ ಸಮಾರಂಭಗಳನ್ನು ಆಯೋಜಿಸಬಾರದು. ಕಬ್ಬಿಣದ ವಸ್ತುಗಳನ್ನು ಬಳಸಬಾರದು. ಹಾಗೆಯೇ ಈ ಸಮಯದಲ್ಲಿ ಬೆಳ್ಳಿ ಅಥವಾ ಹಿತ್ತಾಳೆ ಪಾತ್ರೆಗಳನ್ನು ಬಳಸಬಹುದು.
  • ಉಗುರು ಕತ್ತಿರಿಸುವುದಾಗಲಿ, ಕೂದಲು ಕತ್ತರಿಸುವುದಾಗಲಿ, ರಕ್ತ ಬರುವಂತ ಕೆಲಸಗಳನ್ನೂ ಯಾರೂ ಮಾಡಬಾರದಂತೆ. ಹೌದು, ರಕ್ತ ಬಂದ್ರೆ ಡೇಂಜರ್‌ ಅಂತ ಕೆಲವರು ಹೇಳುತ್ತಾರೆ.
  • ಮನೆಯಿಂದ ಗರ್ಭಿಣಿಯರು ಹೊರ ಬರುವುದನ್ನು ಸಾಧ್ಯವಾದಷ್ಟು ಅವಾಯ್ಡ್‌ ಮಾಡಿ. ಇನ್ನೂ ಹೆಣ್ಣುಮಕ್ಕಳು ಸ್ನಾನ ಮಾಡಿ ಕೂದಲು ಒಣಗಿಸದೇ ಆಚೆ ಬರಬಾರದಂತೆ. ಇನ್ನೂ ಕೆಲವೊಂದಿಷ್ಟು ಹೆಣ್ಣು ಮಕ್ಕಳು ಕೂದಲು ಸ್ನಾನ ಮಾಡಿ ಮನೆ ಗೇಟ್‌ ಬಳಿ ಬಂದು ಕೂದಲು ಒಣಗಿಸಿಕೊಳ್ಳುತ್ತಾರೆ. ಇದನ್ನು ಮಾಡ್ಬೇಡಿ.
  • ಸಾಕಷ್ಟು ಮಂದಿ ರಸ್ತೆಯಲ್ಲಿ ಮೊಟ್ಟೆ ಹೊಡೆದಿರುತ್ತಾರೆ. ನಿಂಬೆಹಣ್ಣು ಮಂತ್ರಿಸಿ ಎಸೆದಿರುತ್ತಾರೆ. ಇದನ್ನು ಕಂಡಾಗ ದಾಟದೇ ದೂರದಿಂದಲೇ ಬನ್ನಿ. ಇದರಿಂದ ಏನಾದ್ರೂ ಆಗುತ್ತೆ ಅಂತಲ್ಲ. ಇದನ್ನು ಮಾಡಿದಾಗ ತಲೆಯಲ್ಲಿ ಇಲ್ಲಸಲ್ಲದ ಯೋಚನೆಗಳು ಬರುತ್ತವೆ.

ಮಹಾಲಯ ಅಮಾವಾಸ್ಯೆಯಂದು ಶ್ರಾದ್ಧ ಆಚರಣೆಗಳನ್ನು ಮಾಡುವುದರಿಂದ ಈ ಪಿತೃ ದೋಷ ನಿವಾರಣೆಯಾಗುತ್ತದೆ. ಸತ್ತಂತಹ ಆತ್ಮಕ್ಕೆ ಮೋಕ್ಷವನ್ನು ನೀಡುತ್ತದೆ. ಪೂರ್ವಜರು ತಮ್ಮ ಮುಂದಿನ ಪೀಳಿಗೆಯವರನ್ನು ಆಶೀರ್ವಾದಿಸುತ್ತಾರೆ ಮತ್ತು ಅವರಿಗೆ ಜೀವನದಲ್ಲಿ ಎಲ್ಲಾ ಸಂತೋಷವನ್ನು ನೀಡುತ್ತಾರೆ.


Share to all

You May Also Like

More From Author