ಅನಧಿಕೃತ ಕಟ್ಟಡಗಳ ತೆರವುಗೊಳಿಸಿ..ಕಮೀಷನರ್ ವಾರ್ನಿಂಗ್.. ಪಾಲಿಕೆಯ ಸದಸ್ಯ ಸಂದಿಲ್ ಕುಮಾರ,ಜೋನಲ್ ಕಮೀಷನರ್ ಚಂದ್ರಶೇಖರ ಮಾಲಿಪಾಟೀಲ್ ಸಾಥ್..

Share to all

ಅನಧಿಕೃತ ಕಟ್ಟಡಗಳ ತೆರವುಗೊಳಿಸಿ..ಕಮೀಷನರ್ ವಾರ್ನಿಂಗ್.. ಪಾಲಿಕೆಯ ಸದಸ್ಯ ಸಂದಿಲ್ ಕುಮಾರ,ಜೋನಲ್ ಕಮೀಷನರ್ ಚಂದ್ರಶೇಖರ ಮಾಲಿಪಾಟೀಲ್ ಸಾಥ್..

ಹುಬ್ಬಳ್ಳಿ:-ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ವಾರ್ಡ್ ಸಂಖ್ಯೆ 51 ಅಕ್ಷಯ ಪಾರ್ಕ್ , ಪ್ರಿಯದರ್ಶಿನಿ ಕಾಲೋನಿ ಹಾಗೂ ಮಹೇಶ್ ಪಿ ಯು ಕಾಲೇಜು ಎದುರುಗಡೆ ರಸ್ತೆ ಗಳಿಗೆ ಭೇಟಿ ನೀಡಿದ ಆಯುಕ್ತರು ಅಕ್ಷಯ ಪಾರ್ಕ್ ನಿಂದ ಮುರ್ಡೇಶ್ವರ ಫ್ಯಾಕ್ಟರಿಗೆ ಹೋಗುವ ರಸ್ತೆಯ ಅಕ್ಕಪಕ್ಕ ಅನಧಿಕೃತವಾಗಿ ಹಾಕಲಾದ ಡಬ್ಬ ಅಂಗಡಿಗಳನ್ನು ತೆರವು ಗೊಳಿಸುವಂತೆ ಸ್ಥಳದಲ್ಲಿ ಹಾಜರಿದ್ದ ವಲಯ ಸಹಾಯಕ ಆಯುಕ್ತರಾದ ಚಂದ್ರಶೇಖರ್ ಮಾಲಿಪಾಟೀಲ್ ಹಾಗೂ ಆರೋಗ್ಯ ನಿರೀಕ್ಷಕರಾದ ಸುನಿಲ್ ಕಾಡದೇವರಮಠ, ಮಹೇಶ್ ಕಾಟೆ ಯರಿಗೆ ನಿರ್ದೇಶನ ನೀಡಿದರು.

ಅಲ್ಲಿಂದ ಮಹೇಶ್ ಪಿ ಯು ಕಾಲೇಜು ಪಕ್ಕದಲ್ಲಿ ಅತಿಕ್ರಮಣ ಮಾಡಿ ಕಟ್ಟಿದಂತಹ ಕಟ್ಟಡವನ್ನು ಸರ್ವೆ ಇಲಾಖೆಯ ಅಧಿಕಾರಿಗಳ ಜೊತೆ ಪರಿಶೀಲಿಸಿದ ಆಯುಕ್ತರು ಅತಿಕ್ರಮಣವನ್ನು ತೆರವು ಗೊಳಿಸುವಂತೆ ‌ಸೂಚಿಸಿದರು.

ಅಲ್ಲದೇ ಎ ಆರ್ ಟಿ ನಗರದ ಕಾಲೋನಿಗೆ ಭೇಟಿ ನೀಡಿದ ಆಯುಕ್ತರು ಪಾಲಿಕೆಯ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸುತ್ತಿರುವ ಕಟ್ಟಡದ ಕಾಮಗಾರಿಯನ್ನು ಸ್ಥಗಿತಗೊಳಿಸಿ ಅತಿಕ್ರಮಣವನ್ನು ತೆರವು ಗೊಳಿಸುವಂತೆ ಸ್ಥಳದಲ್ಲಿ ಹಾಜರಿದ್ದ ವಲಯ ಸಹಾಯಕ ಆಯುಕ್ತರಿಗೆ ನಿರ್ದೇಶನ ನೀಡಿದರು ಹಾಗೂ ಕಾಲೋನಿಯ ನಿವಾಸಿಗಳು ನೀಡಿದ ದೂರಿನ ಮೇರೆಗೆ ಜನವಸತಿ ಪ್ರದೇಶದಲ್ಲಿರುವ ಚಿಕನ್ ಅಂಗಡಿಯನ್ನು ತಕ್ಷಣ ಮುಚ್ಚುವಂತೆ ಆದೇಶ ನೀಡಿದರು.

ಈ ಸಮಯದಲ್ಲಿ ಪಾರ್ಕ್ ನ ಪಾಲಿಕೆಯ ಸದಸ್ಯರಾದ ಸಂಧಿಲ್ ಕುಮಾರ ಆಯುಕ್ತರಿಗೆ ಸಾಥ್ ನೀಡಿದರು.ಈ ಸಮಯದಲ್ಲಿ ವಲಯ ಸಹಾಯಕ ಆಯುಕ್ತರಾದ ಚಂದ್ರಶೇಖರ್ ಮಾಲಿಪಾಟೀಲ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಕಾಂಬ್ಳಿ, ಕಿರಿಯ ಅಭಿಯಂತರರಾದ ಪುನಿತಾ, ಆರೋಗ್ಯ ನಿರೀಕ್ಷಕರಾದ ಸುನಿಲ್ ಕಾಡದೇವರಮಠ,ಮಹೇಶ್ ಕಾಟೆ ಇನ್ನಿತರರು ಹಾಜರಿದ್ದರು.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author