Darshan: ದರ್ಶನ್ ಗ್ಯಾಂಗ್‌ ಕನಸು ಇಂದಿಗೆ ನನಸು! ಜೈಲಿನಿಂದ ಮೂವರು ಆರೋಪಿಗಳು ರಿಲೀಸ್..!

Share to all

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ 17 ಮಂದಿ ಜೈಲು ಸೇರಿದ್ದಾರೆ. ತನಿಖೆ ಮುಗಿದು ಚಾರ್ಜ್​​ಶೀಟ್ ಸಲ್ಲಿಕೆಯಾದ ಬಳಿಕ ಆರೋಪಿಗಳು ಒಬ್ಬೊಬ್ಬರಾಗಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ರು. ಇಂದು ಮೂವರು ಜೈಲಿಂದ ಬಿಡುಗಡೆಯಾಗಿದ್ದಾರೆ.

ಆರೋಪಿಗಳಾದ ಕಾರ್ತಿಕ್ ಅಲಿಯಾಸ್ ಕಪ್ಪೆ, ನಿಖಿಲ್ ನಾಯಕ್ ಹಾಗೂ ಕೇಶವಮೂರ್ತಿಗೆ ಜಾಮೀನು ಸಿಕ್ಕಿದೆ. ಸೆ.23 ರಂದು ಮೂವರು ಆರೋಪಿಗಳಿಗೆ ಜಾಮೀನು ಮಂಜೂರಾಗಿತ್ತು. ಜಾಮೀನು ಸಿಕ್ಕರೂ ಶ್ಯೂರಿಟಿ ಸಿಗದ ಹಿನ್ನೆಲೆ ಮೂವರು ಆರೋಪಿಗಳು ಕೂಡ ಜೈಲಿನಲ್ಲಿಯೇ ಇದ್ದರು. ಇದೀಗ ಶ್ಯೂರಿಟಿ ಸಿಕ್ಕಿದ್ದು, ಸೆಷನ್ ಕೋರ್ಟ್ ನಲ್ಲಿ ಶ್ಯೂರಿಟಿ ಸ್ವೀಕಾರವಾಗಿದೆ.

ಶ್ಯೂರಿಟಿ ಸಿಕ್ಕ ಹಿನ್ನೆಲೆ ತುಮಕೂರು ಜೈಲಿನಲ್ಲಿರುವ ಮೂವರು ಆರೋಪಿಗಳು ಜೈಲಿನಿಂದ ರಿಲೀಸ್ ಆಗಿದ್ದಾರೆ. ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಇನ್ನು ಕೆಲವರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಬೇಲ್ ಗಾಗಿ ಕಾಯ್ತಿದ್ದಾರೆ.

ಚಿತ್ರದುರ್ಗದ ಕೊಲೆ ಕೇಸ್​ನಲ್ಲಿ ನಟಿ ಪವಿತ್ರಾ ಗೌಡ ಎ1 ಆಗಿದ್ದು, ನಟ ದರ್ಶನ್ ಎ2 ಆಗಿದ್ದಾರೆ. ಇಬ್ಬರು ಕೂಡ ಜಾಮೀನು ಅರ್ಜಿ ಸಲ್ಲಿಸಿದ್ರು. ಆದ್ರೆ ಇಬ್ಬರ ಬೇಲ್​ ಅರ್ಜಿ ​ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ. ಇದೇ ಕೇಸ್​ನಲ್ಲಿ ಸಿಲುಕಿರುವ ಮೂವರಿಗೂ ಕೂಡ ಇದೀಗ ಜಾಮೀನು ಸಿಕ್ಕಿದೆ. ಮೂವರಿಗೆ ಜಾಮೀನು ಸಿಗ್ತಿದ್ದಂತೆ ಉಳಿದ ಆರೋಪಿಗಳ ಕಣ್ಣು ಜಾಮೀನಿನತ್ತ ನೆಟ್ಟಿದೆ.

 

 


Share to all

You May Also Like

More From Author