ರೈತ ಹೋರಾಟಗಾರನಿಗೆ “ಸೂ..ಮಕ್ಕಳು” ಎಂದು ನಾಲಿಗೆ ಹರಿಬಿಟ್ಟ ಶಾಸಕ ಕೋನರೆಡ್ಡಿ… ವೀಡಿಯೋ ವೈರಲ್…

Share to all

ರೈತ ಹೋರಾಟಗಾರನಿಗೆ “ಸೂ..ಮಕ್ಕಳು” ಎಂದು ನಾಲಿಗೆ ಹರಿಬಿಟ್ಟ ಶಾಸಕ ಕೋನರೆಡ್ಡಿ… ವೀಡಿಯೋ ವೈರಲ್…

ಅಣ್ಣಿಗೇರಿ: ಪಟ್ಟಣದ ಸರಕಾರಿ ಉಗ್ರಾಣದದಲ್ಲಿ ಬೀಜ ಕಳ್ಳತನ ಪ್ರಕರಣದಲ್ಲಿ ಸರಿಯಾಗಿ ತನಿಖೆಯಾಗಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದ ರೈತ ನಾಯಕರಿಗೆ ಕಾಂಗ್ರೆಸ್ ಪಕ್ಷದ ಶಾಸಕ ಎನ್.ಎಚ್.ಕೋನರೆಡ್ಡಿ ಅವಾಚ್ಯ ಶಬ್ದ ಉಪಯೋಗಿಸಿ ಆವಾಜ್ ಹಾಕಿರುವ ವಿಡಿಯೋ ಜಿಲ್ಲೆಯಲ್ಲಿ ವೈರಲ್ ಆಗುತ್ತಿದ್ದು, ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಶಾಸಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.

*ರೈತ ಹೋರಾಟಗಾರನಿಗೆ ಸೂ….ಮಕ್ಕಳು ಎಂದು ನಾಲಿಗೆ ಹರಿಬಿಟ್ಟ ಶಾಸಕ ಕೋನರೆಡ್ಡಿ….*

ಅಖಿಲ ಕರ್ನಾಟಕ ರೈತ ಸಂಘದ ಹಸಿರು ಸೇನೆಯ ವತಿಯಿಂದ ಅಣ್ಣಿಗೇರಿಯಲ್ಲಿ ರಾಜ್ಯಾಧ್ಯಕ್ಷರಾಗಿರುವ ಮಹಾದೇವಿ ಹುಯಿಲಗೋಳ ಇವರ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಆಗಮಿಸಿದ್ದ ನವಲಗುಂದ ಕ್ಷೇತ್ರದ ಕಾಂಗ್ರೆಸ್ ಶಾಸಕ N. H. ಕೋನರೆಡ್ಡಿ ಮನವಿ ಪತ್ರ ನೀಡುವ ವೇಳೆ ಸ್ಥಿಮಿತ ಕಳೆದುಕೊಂಡ ರೀತಿಯಲ್ಲಿ ವರ್ತನೆ ಮಾಡಿದ್ದಾರೆ.

ರೈತ ನಾಯಕ, ಕುರುಬ ಸಮಾಜದ ಮುಖಂಡ ಭದ್ರಾಪುರದ ಹನುಮಂತ ಕಂಬಳಿ ಮಾತನಾಡುವ ವೇಳೆ ರಾಜ್ಯ ಸರ್ಕಾರದ ಕೆಲವು ಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಿದ್ದಾರೆ. ಈ ವೇಳೆ ಕೂಗಾಟ ನಡೆಸುತ್ತ ಸ್ಥಿಮಿತ ಕಳೆದಕೊಂಡ ಶಾಸಕ ಕೋನರೆಡ್ಡಿ, ಮನವಿ ಕೊಡುವ ವೇಳೆ ಏನನ್ನು ಮಾತನಾಡಬಾರದು. “ಅಂತಿಂಥ ಸೂ..ಮಕ್ಳನ್ನ ಮಾತಾಡ್ಸಬ್ಯಾಡ್ರೀಲ್ಲಿ” ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಶಾಸಕರನ್ನು ಕೂಡಲೇ ಅಲ್ಲಿಂದ ರವಾನಿಸಿದ್ದಾರೆ.

ಉದಯ ವಾರ್ತೆ

ಅಣ್ಣಿಗೇರಿ


Share to all

You May Also Like

More From Author