ಹುಬ್ಬಳ್ಳಿಯಲ್ಲಿ ಮತ್ತಷ್ಟು ಹುಲಿ ಉಗರುಗಳು – ಯಾರ ಯಾರ ಕೊರಳಲ್ಲಿ ಹುಲಿ ಉಗರುಗಳುಗಳು ಇವೆ ಗೊತ್ತಾ…..ಉದಯ ವಾರ್ತೆಯಲ್ಲಿ ವೈರಲ್ ಪೊಟೊ ಸಮೇತ ಮಾಹಿತಿ

Share to all

ಹುಬ್ಬಳ್ಳಿಯಲ್ಲಿ ಮತ್ತಷ್ಟು ಹುಲಿ ಉಗರುಗಳು – ಯಾರ ಯಾರ ಕೊರಳಲ್ಲಿ ಹುಲಿ ಉಗರುಗಳುಗಳು ಇವೆ ಗೊತ್ತಾ…..ಉದಯ ವಾರ್ತೆಯಲ್ಲಿ ವೈರಲ್ ಪೊಟೊ ಸಮೇತ ಮಾಹಿತಿ…..

ಹುಬ್ಬಳ್ಳಿ –

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಹುಲಿ ಉಗರಿನ ಜಾಲ ವ್ಯಾಪಕವಾಗಿ ಹರಡುತ್ತಿದೆ.ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅಳಿಯನ ಬೆನ್ನಲ್ಲೇ ಸಧ್ಯ ಈ ಒಂದು ಹುಲಿ ಉಗರುಗಳು ಇನ್ನೂ ನಗರದ ತುಂಬೆಲ್ಲಾ ಇವೆ. ಹಲವು ಶ್ರೀಮಂತರ ಬಳಿ ಇವೆ ಎಂಬೋದು ವೈರಲ್ ಆಗಿರುವ ಪೊಟೋಗಳಿಂದ ಕಂಡು ಬರುತ್ತಿದೆ.ಹೌದು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದಕ್ಕೆ ಬಿಗ್ ಬಾಸ್ ಸ್ಪರ್ಧಿ ವರ್ತೂರ ಸಂತೋಷ ಬಂಧನವಾಗಿ ಸಧ್ಯ ಜಾಮೀನಿನ ಮೇಲೆ ಹೊರಗಡೆ ಬಿಂದಿದ್ದು ಆಗಿದೆ ಆದರೆ ಇದರ ಗಾಟು ರಾಜ್ಯಾಧ್ಯಂತ ಜೋರಾಗಿದೆ ಎಂಬೋದು ವೈರಲ್ ಆಗಿರುವ ಈ ಎಲ್ಲಾ ಪೊಟೊ ಗಳಿಂದ ಕಂಡು ಬರುತ್ತಿದೆ.ಹೀಗಾಗಿ ರಾಜ್ಯದಲ್ಲಿ ಸಧ್ಯ ಹುಲಿಯದೇ ಸದ್ದು ಕಂಡು ಬರುತ್ತಿದ್ದು ಹೀಗಾಗಿ ವಾಣಿಜ್ಯ ನಗರದ ತುಂಬೆಲ್ಲಾ ಈ ಹುಲಿ ಉಗರಿನ ಪೆಂಡೆಂಟ್ ಧರಿಸಿದ ಹಲವರ ಪೋಟೋಗಳು ವ್ಯೆರಲ್ ಆಗತ್ತಿದ್ದು ಇವರ ಬಂಧನ ಇವರ ವಿಚಾರಣೆ ಯಾವಾಗ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಸಾಮಾಜಿಕ ಜಾಲ ತಾಣಗಳಲ್ಲಿ ಕೇಳುತ್ತಿದ್ದಾರೆ.ಕೆಲವರು ಶೋಕಿಗಾಗಿ ಹುಲಿಯ ಪೆಂಡೆಂಟ್ ಹಾಕಿಕೊಂಡರೆ ಇನ್ನೂ ಕೆಲವರು ಶ್ರೀಮಂತರು ಧರಿಸಿರುವುದು ಪೋಟೋಗಳು ವ್ಯೆರಲ್ ಆಗುತ್ತಿವೆ.ಅತ್ತ ಸಂತೋಷಗೆ ಒಂದು ಕಾನೂನು ಆದರೆ ಇವರಿಗೆ ಯಾವ ಕಾನೂನು ಎಂಬ ಪ್ರಶ್ನೆಯನ್ನು ಕೇಳುತ್ತಿದ್ದು ಈ ಕಾನೂನು ಅನ್ವಯವಾಗುವುದಿಲ್ಲವೇ ಎನ್ನುತ್ತಿದ್ದಾರೆ ಜನರು.ಈ ನಡುವೆ ಹುಬ್ಬಳ್ಳಿಯಲ್ಲಿ ಈಗ ನಾವು ತೋರಿಸ್ತಾ ಇರೋದು ಕೇವಲ ಸ್ಯಾಂಪಲ್ ಮಾತ್ರ ಗಲ್ಲಿ ಗಲ್ಲಿಯಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿದವರು ಸಿಗತಾರೆ ಅಂತಹವರನ್ನು ಗುರುತಿಸಿ ಅಧಿಕಾರಿಗಳು ತನಿಖೆ ನಡೆಸಿ ಅವರು ಧರಿಸಿದ ಪೆಂಡೆಂಟ್ ಓರಿಜನಲ್/ ಡುಪ್ಲಿಕೇಟಾ ಅನ್ನೋದನ್ನ ಗುರುತಿಸಬೇಕಾಗಿದೆ.ಕೆಲವರಿಗೆ ಈ ಹುಲಿ ಉಗುರನ್ನು ಹೋಲುವ ಪೆಂಡೆಂಡ್ ಧರಿಸುವುದೂ ಅಪರಾಧ ಎನ್ನುವುದು ಗೊತ್ತಿಲ್ಲಾ.ಅದು ಓರಿಜನಲ್ ಇದ್ದರೆ ಅದನ್ನು ಅರಣ್ಯ ಇಲಾಖೆಯಿಂದ ದ್ರಡೀಕರಿಸಿಕೊಂಡು ಮಾಲಿಕತ್ವ ಪಡೆಯಬೇಕು.ಅದೂ ಸಹ 2003 ರವರೆಗೆ ಮಾತ್ರ ಅವಕಾಶ ಕೊಡಲಾಗಿತ್ತು.ಈಗೇನಿದ್ದರೂ ಯಾರ ಬಳಿ ವನ್ಯ ಜೀವಿಗಳ ವಸ್ತುಗಳು ಇವೆಯೋ ಅವರು ಅರಣ್ಯ ಇಲಾಖೆಗೆ ವಾಪಸ್ಸು ಕೊಡಬೇಕು.ಇಲ್ಲದಿದ್ದರೆ ಕ್ರಮ ಎದುರಿಸಬೇಕು.ಯಾರ ಬಳಿಯಾದರೂ ವನ್ಯ ಜೀವಿಗಳ ವಸ್ತುಗಳು ಕಂಡರೆ ಅರಣ್ಯ ಇಲಾಖೆಯ ಹೆಲ್ಪ್ ಲ್ಯೆನ್ ನಂಬರ 1926 ಕರೆ ಮಾಡಿ ದೂರು ಸಲ್ಲಿಸಿ.ಅದು ಮಾಡಲು ಸಾದ್ಯವಾಗದೇ ಹೋದರೆ ಉದಯ ವಾರ್ತೆಯ ಈ 9448334896 ನಂಬರ್ ಗೆ ಸಂಪರ್ಕಿಸಿ ಇಲ್ಲವೇ ಸುದ್ದಿಗಾಗಿ ಮಾಹಿತಿ ನೀಡಬಹುದು.

ಉದಯ ವಾರ್ತೆ ಹುಬ್ಬಳ್ಳಿ…..


Share to all

You May Also Like

More From Author