ಲಾರಿ ಪಲ್ಟಿ..ಡ್ರೈವರ್ ಬೆನ್ನು ಸೀಳಿ ಎದೆಯ ಮುಂಬಾಗಕ್ಕೆ ಬಂದ ಕಬ್ಬಿಣದ ರಾಡ್..ಆದರೂ ಬದುಕಿದ ಗಟ್ಟಿ ಜೀವ..
ಹುಬ್ಬಳ್ಳಿ:- ಹುಬ್ಬಳ್ಳಿಯಿಂದ ಡಾವಣಗೇರಿ ಕಡೆಗೆ ಹೊರಟಿದ್ದ ಲಾರಿಯೊಂದು ಪಲ್ಟಿ ಹೊಡೆದ ಪರಿಣಾಮ ಡಿವೈಡರ್ ಗೆ ಹಾಕಿದ್ದ ಕಬ್ಬಿಣದ ರಾಡೊಂದು ಡ್ರೈವರ್ ಬಾಡಿ ಸೀಳಿದ ಘಟನೆ ಎದೆ ಝಲ್ ಎನಿಸುವಂತಿದೆ.
ಹುಬ್ಬಳ್ಳಿಯಿಂದ ಡಾವಣಗೇರಿ ಕಡೆಗೆ ಹೊರಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಾಣೆಬೆನ್ನೂರ ಹತ್ತಿರ ಪಲ್ಟಿ ಹೊಡೆದಿದೆ.ಪಲ್ಟಿ ಹೊಡೆದ ಪರಿಣಾಮ ಡಿವೈಡರ್ ಗೆ ಹಾಕಿದ ಪೈಪ್ ಎದೆ ಸೀಳಿದೆ.ಏನೂ ತಿಳಿಯದಾಗಿ ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ ಡ್ರೈವರ್ ನನ್ನು ಸಾರ್ವಜನಿಕರು ಅಂಬ್ಯುಲೆನ್ಸ್ ಮೂಲಕ ಹುಬ್ಬಯ ಕಿಮ್ಸ್ ಗೆ ದಾಖಲಿಸಿದ್ದಾರೆ.