ಲೀಡರಗಳಿರಲಿ,ಎಂತಹವರೇ ಇರಲಿ ನನ್ನ ಚುನಾವಣೆಯಲ್ಲಿ ಷಡ್ಯಂತ್ರ ಮಾಡಿದವರನ್ನು ಬಿಡಲ್ಲಾ ಎಂದ ಪ್ರಸಾದ ಅಬ್ಬಯ್ಯ.

Share to all

ಹುಬ್ಬಳ್ಳಿ:-ಇನ್ನೇನು ಕೆಲವೇ ತಿಂಗಳುಗಳಲ್ಲಿ ನಾವು ಲೋಕಸಭಾ ಚುನಾವಣೆ ಎದುರಿಸಲಿದ್ದೇವೆ ಹೀಗಾಗಿ ಈ ಪ್ರಗತಿ ಪರಿಶೀಲನಾ ಸಭೆ ಬಹಳ ಮಹತ್ತರವಾಗಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ನಮ್ಮ ಸರಕಾರ ಬಂದ ತಕ್ಷಣ ಐದು ಗ್ಯಾರಂಟಿಗಳನ್ನ ಕೊಟ್ಟಿದ್ದೇವೆ.ಕಾರಣ ನಾವು ಕೊಟ್ಟ ಸ್ಕೀಂನಿಂದ ಜನ ನೆಮ್ಮದಿಯಿಂದ ಇದ್ದಾರೆ.ಕಾಂಗ್ರೆಸ್ ಸರಕಾರ ಬಂದರೆ ಮಾತ್ರ ಜನ ನೆಮ್ಮದಿ ಇರತಾರೆ ಅನ್ನೋ ಭಾವನೆ ಜನರಲ್ಲಿದೆ.ದೇಶದಲ್ಲಿ ನಮ್ಮ ಸರಕಾರ ಸಂಚಲನ ಮೂಡಿಸಿದೆ.ಕಾಂಗ್ರೆಸ್ ಗೆ ತನ್ನದೇ ಆದ ಇತಿಹಾಸ ಇದೆ.ಈ ಹಿಂದೆ ಯಾರು ಕಾಂಗ್ರೆಸ್ ಬೇರು ಕಿತ್ತು ಹಾಕ್ತೇವಿ ಎಂದರೋ ಅವರ ಬೇರೇ ಸಡಿಲಾಗಿ ಹೋಗಿದೆ.

ಕಾಂಗ್ರೆಸ್ ಅಳಿಸೋಕೆ ಯಾರಪ್ಪನಿಂದಲೂ ಸಾದ್ಯವಿಲ್ಲಾ.ಆದ್ರೆ ಕಾಂಗ್ರೆಸ್ ನಲ್ಲಿ ನಮ್ಮವರೇ ಕಾಲೆಳೆಯೋ ಪರಿಸ್ಥಿತಿ ಇದೆ.ಅಂತಹವರ ಮೇಲೆ ಶಿಸ್ತು ಕ್ರಮ ಆದರೆ ಕಾಂಗ್ರೆಸ್ ಸೋಲಿಸಲು ಯಾರಿಂದಲೂ ಸಾದ್ಯವಿಲ್ಲಾ.ಚುನಾವಣೆಯಲ್ಲಿ ನಾವು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು.ಅನ್ನ ತಿಂದ ಮನೆಗೆ ದ್ರೋಹ ಬಗೆಯಬಾರದು.ನನ್ನ ಕ್ಷೇತ್ರದಲ್ಲಿ ಪಕ್ಷದಲ್ಲಿ ಇದ್ದುಕೊಂಡೇ ನನಗೆ ಅನ್ಯಾಯ ಮಾಡಿದ್ದಾರೆ.ಅಂತಹವರನ್ನು ಬೆಳೆಯೋಕೆ ಕೊಡಲ್ಲಾ ಅವರನ್ನ ಮುಗಿಸುವುದು ಗೊತ್ತು.ನಿಮಗೆ ಈ ಪಕ್ಷ ಇಷ್ಡ ಇಲ್ಲದಿದ್ದರೆ ಬೇರೇ ಪಕ್ಷ ನೋಡಿಕೊಳ್ಳಿ ಎಂತಹ ದೊಡ್ಡ ಲೀಡರ್ ಇದ್ದರೂ ನಾನು ಕೇಳೋದಿಲ್ಲಾ ಎಂದು ಪಕ್ಷ ವಿರೋದಿಗಳಿಗೆ ಶಾಸಕ ಪ್ರಸಾದ ಅಬ್ಬಯ್ಯ ಎಚ್ಚರಿಕೆ ಕೊಟ್ಟಿದ್ದಾರೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author