ಬೆಂಗಳೂರು:- ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿಯೊಂದು ಕಾದಿದ್ದು, ಶೀಘ್ರವೇ ಟಿಕೆಟ್ ದರ ಏರಿಕೆ ಆಗಲಿದೆ. ಸದ್ಯ 15 ರಿಂದ 20% ಟಿಕೆಟ್ ದರ ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಟಿಕೆಟ್ ದರ ಏರಿಕೆಗೆ ನಮ್ಮ ಮೆಟ್ರೋ.’ದಿ ಫೇರ್ ಪಿಕ್ಸೇಷನ್ ಕಮಿಟಿ’ ರಚನೆ ಮಾಡಿದೆ. ಇದೊಂದು ಸ್ವಾತಂತ್ರ ಕಮಿಟಿಯಾಗಿದ್ದು,ಪ್ರಯಾಣಿಕರ ಸಲಹೆ ಪಡೆದು ಟಿಕೆಟ್ ದರ ಏರಿಕೆಗೆ ಈ ಕಮಿಟಿ ಮುಂದಾಗಲಿದ್ದು, ಅ.21 ರೊಳಗೆ ಪ್ರಯಾಣಿಕರು ತಮ್ಮ ಅಭಿಪ್ರಾಯ ತಿಳಿಸಲು ಕಾಲಾವಕಾಶ ನೀಡಲಾಗಿದೆ. ಪ್ರಯಾಣಿಕರ ಸಲಹೆಯನ್ನffc@bmrc.co.in ಗೆ ಕಳಿಸುವಂತೆ ಸೂಚನೆ ನೀಡಲಾಗಿದೆ.
2017ರ ನಂತರ ಇದೀಗ ಮೆಟ್ರೋ ದರ ಏರಿಕೆಗೆ ತೀರ್ಮಾನ ಮಾಡಿದೆ. ಎಷ್ಟು ದರ ಏರಿಕೆ ಮಾಡಬೇಕೆಂದು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಕ್ಕೆ ಸಾರ್ವಜನಿಕರನೊಳಗೊಂಡ ಕಮಿಟಿ ರಚನೆ ಮಾಡಿದ್ದು, ಈ ಬಗ್ಗೆ ಅಧಿಕೃತವಾಗಿ ಬಿಎಂಆರ್‌ಸಿಎಲ್ ಜಾಹೀರಾತು ನೀಡಿದೆ. ಮೆಟ್ರೋ ಟಿಕೆಟ್ ದರ ಏರಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ.
ಈಗಾಗಲೇ ನಮ್ಮ ಮೆಟ್ರೋದ ಟಿಕೆಟ್ ದರ ಕನಿಷ್ಠ ದರ 10 ರೂ ಆಗಿದ್ದು, ಗರಿಷ್ಠ ದರ 60 ರೂ. ವರೆಗೆ ಇದೆ. ಈಗ 15 ರಿಂದ 20 ರಷ್ಟು ಟಿಕೆಟ್ ದರ ಏರಿಕೆ ಆಗಲಿದೆಯಂತೆ. ಮುಂದಿನ ತಿಂಗಳಿಂದ ಹೊಸ ದರ ಜಾರಿ ಆಗುವ ಸಾಧ್ಯತೆಯಿದೆ. ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರವಾಗಿ ಕಮಿಟಿ ಆಗಿದ್ದು, ಈಗಾಗಲೇ ಒಂದು ಸುತ್ತಿನ ಸಭೆ ಕೂಡ ಆಗಿದೆ. ಕಮಿಟಿ ಶೀಘ್ರದಲ್ಲೇ ಬಿಎಂಆರ್ಸಿಎಲ್ಗೆ ವರದಿ ನೀಡಲಿದ್ದು, ವರದಿ ಆಧಾರದ ಮೇಲೆ ದರ ಏರಿಕೆ ಮಾಡಲಾಗುತ್ತದೆ
ರಾಜ್ಯ ಹಾಗೂ ಕೇಂದ್ರದ ಹಿರಿಯ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡ ಕಮಿಟಿ ಇದಾಗಿದ್ದು, ಕಮಿಟಿಯು ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡಲಿದೆ. ನಮ್ಮ ಖರ್ಚು,ವೆಚ್ಚ ನೋಡಿಕೊಂಡು ದರ ಏರಿಕೆ ಮಾಡಲಿದ್ದೇವೆ ಎಂದು ಬಿಎಂಆರ್‌ಸಿಎಲ್ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ಹೇಳಿದ್ದಾರೆ.