ಕೈ ಮುಖಂಡರ ನಡುವೆ ಗಲಾಟೆ..ಹುಬ್ಬಳ್ಳಿಯ ಪ್ರತಿಷ್ಠಿತ ಹೊಟೆಲ್ ನಲ್ಲಿ ಗಲಾಟೆ.ರಾಜ್ಯಸಭಾ ಸದಸ್ಯರ ಮುಂದೇ ನಡೆಯಿತು ಕಾಂಗ್ರೆಸ್ ಮುಖಂಡರ ಅಸಮಾಧಾನ.
ಹುಬ್ಬಳ್ಳಿ:- ಪಕ್ಷದ ವಿಚಾರ,ಕಾರ್ಯಕರ್ತರ ಕಡೆಗಣನೆಗೆ ಸಂಬಂಧಿಸಿದಂತೆ ರಾಜ್ಯ ಸಭಾ ಸದಸ್ಯ ನಾಶೀರ ಹುಸೇನ ಅವರಿಗೆ ದೂರು ಕೊಡಲು ಮುಂದಾದಾಗ ಕಾಂಗ್ರೆಸ್ ಪಕ್ಷದ ಮುಖಂಡರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ.
ಹುಬ್ಬಳ್ಳಿಯ ಗೋಕುಲ ರಸ್ತೆಯ ಪ್ರತಿಷ್ಠಿತ ಹೊಟೆಲ್ ಒಂದರಲ್ಲಿ ತಂಗಿದ್ದ ರಾಜ್ಯಸಭಾ ಸದಸ್ಯ ನಾಶೀರ್ ಹುಸೇನ್ ಅವರಿಗೆ ಪಕ್ಷದಲ್ಲಿಎಲ್ಲವೂ ಸರಿ ಇಲ್ಲಾ.ಕಾರ್ಯಕರ್ತರ ಕಡೆಗಣನೆ ನಡೀತಾ ಇದೆ.ಅಂತಾ ದೂರು ಕೊಡಲು ಕೈ ಮುಖಂಡ ಶಹಜ್ಮಾನ್ ಹಾಗೂ ಅವರ ಬೆಂಬಲಿಗರು ಮುಂದಾದಾಗ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಅಲ್ತಾಪ ಹಳ್ಳೂರ ಅವರಗ ಮಗನ ನಡುವೆ ಬಾಯಿಗೆ ಬಾಯಿ ಹತ್ತಿ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿದೆ ಎನ್ನಲಾಗಿದೆ.
ಕೊನೆಗೆ ಇಬ್ಬರನ್ನೂ ಕುಳ್ಳರಿಸಿಕೊಂಡು ರಾಜ್ಯ ಸಭಾ ಸದಸ್ಯ ನಾಶೀರ ಹುಸೇನ್ ಸಮಾಧಾನ ಪಡಿಸಿದರು ಎನ್ನಲಾಗಿದೆ.