ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಸದ್ದು ಮಾಡುತ್ತಿದ್ದಂತೆ ಇದೀಗ ಮುಂದಿನ ಸಿಎಂ ನಾನೇ ಎಂದು ಹಲವರು ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಏನಿಲ್ಲ ಏನಿಲ್ಲ ಎನ್ನುತ್ತಲೇ ಸರಣಿ ಸಭೆಗಲು ಗುಟ್ಟು ಗುಟ್ಟಾಗಿ ನಡೆಯುತ್ತಲೇ ಇದೆ.
ಇದರ ಬೆನ್ನಲ್ಲೇ ಸಚಿವ ಸತೀಶ್ ಜಾರಕಿಹೊಳಿಯನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ದಿಢೀರ್ ಭೇಟಿಯಾಗಿದ್ದಾರೆ. ಶಿವಾನಂದ ಸರ್ಕಲ್ ಬಳಿಯ ಸರ್ಕಾರಿ ನಿವಾಸದಲ್ಲಿ ವಿಜಯೇಂದ್ರ-ಜಾರಕಿಹೊಳಿ ಭೇಟಿ ಆಗಿದ್ದಾರೆ.
ಈ ಸಂದರ್ಭದಲ್ಲಿ ಶಿಕಾರಿಪುರದಲ್ಲಿ ಹೊಸದಾಗಿ ನಿರ್ಮಾಣವಾಗಲಿರುವ ಕುಟ್ರಳ್ಳಿ ಟೋಲ್‌ನಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಭೇಟಿಯ ಸಮಯದಲ್ಲೇ ಜಾರಕಿಹೊಳಿ ಜೊತೆ ವಿಜಯೇಂದ್ರ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಮನವಿ ಸ್ವೀಕಾರದ ಬಳಿಕ ನಿಮ್ಮ ಜೊತೆಗೆ ಮಾತುಕತೆ ನಡೆಸಬೇಕು ಬನ್ನಿ ಸರ್ ಎಂದು ವಿಜಯೇಂದ್ರ ಜಾರಕಿಹೊಳಿ ಅವರನ್ನು ಕರೆದಿದ್ದಾರೆ. ಬಿವೈವಿ ಕರೆದ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ.
ಇನ್ನೂ ಸಿಎಂ ಸಿದ್ದರಾಮಯ್ಯ ನಾನು ಜಗ್ಗೋದು ಇಲ್ಲ. ಬಗ್ಗೋದು ಇಲ್ಲ ಎನ್ನುತ್ತಿದ್ದಾರೆ. ಆದರೆ ಕಾಂಗ್ರೆಸ್‌ನ ಒಳಗೆ ಏನೋ ನಿಗೂಢ ನಡೆಗಳನ್ನು ಇಡಲಾಗ್ತಿದೆ ಅನ್ನೋದು ಮಾತ್ರ ಸತ್ಯ. ಈ ನಡುವೆ ದಲಿತ ಸಿಎಂ ಅಷ್ಟೇ ಅಲ್ಲ ಮುಸ್ಲಿಮರಿಗೂ ಸಿಎಂ ಸ್ಥಾನ ಬೇಕು ಅನ್ನೋ ಆಸೆ ವ್ಯಕ್ತವಾಗ್ತಿದೆ.