ಹುಬ್ಬಳ್ಳಿ:- ಹಣ ಮಾಡಬೇಕು ಎಂಬ ಆಸೆಗೆ ಬಿದ್ದು ಮಾಡಬಾರದ ಕೆಲಸ ಮಾಡುತ್ತಿದ್ದ ತಂಡವೊಂದರ ಹಿಸ್ಟರಿ ಕೇಳಿದರೆ ನೀವು ಛೇ ಎಂತಹ ನೀಚರು ಇವರು ಅಂತೀರಿ.. ಏನದು ಸ್ಟೋರಿ ಅಂತೀರಾ ಇಲ್ಲಿದೆ ನೋಡಿ..
ಹುಬ್ಬಳ್ಳಿಯ ಡಾಕಪ್ಪ ಸರ್ಕಲ್ ನಿವಾಸಿ ಸಯ್ಯದ ಎಂಬಾತ ಹಣವಂತರನ್ನು ಗುರುತಿಸಿ ತನ್ನ ಲವ್ವರ್ ಅನ್ನೇ ಅವರ ಬಳಿ ಬಿಟ್ಟು ಮಲಗಿಸಿ ವಿಡಿಯೋ ಅಥವಾ ಅಡಿಯೋ ಮಾಡಿಕೊಂಡು ಅವರ ಬಾಗಿಲು ಬಡಿಯುವ ಹನಿಟ್ರ್ಯಾಪ್ ಟೀಂ ಒಂದನ್ನ ಹುಬ್ಬಳ್ಳಿಯ ಸಿಸಿಬಿ ಪೋಲೀಸರು ಹೆಡಮುರಿ ಕಟ್ಟಿದ್ದಾರೆ..
ಹುಬ್ಬಳ್ಳಿಯ ಬಾಂಡೆ ಅಂಗಡಿ ವ್ಯಾಪಾರಿಯೊಬ್ಬನಿಗೆ ಹನಿಟ್ರ್ಯಾಪ್ ಮಾಡಿ ಹಣಕ್ಕಾಗಿ ಈ ಟೀಂ ಬೇಡಿಕೆ ಇಟ್ಟಿತ್ತು.ಇವರಿಂದ ಬೇಸತ್ತ ವ್ಯಾಪಾರಿ ಹುಬ್ಬಳ್ಳಿಯ ಅಶೋಕ ನಗರ ಪೋಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದರು.ವ್ಯಾಪಾರಿಯ ದೂರಿನನ್ವಯ ಸಿಸಿಬಿ ಪೋಲೀಸರು ಐವರನ್ನು ವಶಕ್ಕೆ ಪಡೆದಿದ್ದಾರೆ.