ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಹುಬ್ಬಳ್ಳಿ ಕ್ರಿಕೆಟ್ ಬೆಟ್ಟಿಂಗ್: ಇಡಿ ದಾಳಿ
ಹುಬ್ಬಳ್ಳಿ : ಕ್ರಿಕೆಟ್ ಬೆಟ್ಟಿಂಗ್ ಸೇರಿದಂತೆ ಇತರೆ ಬೆಟ್ಟಿಂಗ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು ರಾಷ್ಟ್ರದ ಮೂರು ರಾಜ್ಯದ ಮೇಲೆ ದಾಳಿ ನಡೆಸಿದ್ದು ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಮಧ್ಯಪ್ರದೇಶದ ಇಂದೋರ್,ಮಹಾರಾಷ್ಟ್ರದ ಮುಂಬೈ, ಕರ್ನಾಟಕದ ಹುಬ್ಬಳ್ಳಿಯಲ್ಲಿ ದಾಳಿ ನಡೆಸಲಾಗಿದ್ದು ತಿಳಿದುಬಂದಿದೆ
ಇನ್ನು ಹುಬ್ಬಳ್ಳಿಯಲ್ಲಿ ವೈಟ್ ಕಾಲರ್ ರೀತಿಯಲ್ಲಿ ಬದುಕುತ್ತಿರುವ ಕ್ರಿಕೆಟ್ ಬುಕ್ಕಿ ಗಳ ಮನೆಗೆ ಇಡಿ ದಾಳಿ ನಡೆಸಿದ್ದು ಸ್ಥಳೀಯ ಪೊಲೀಸರಿಗೆ ಮಾಹಿತಿ ಸಿಕ್ಕಿಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ ರಾಷ್ಟ್ರ ಮಟ್ಟದಲ್ಲಿ ಹುಬ್ಬಳ್ಳಿ ಕುಖ್ಯಾತಿ ಗಳಿಸಲು ಸ್ಥಳೀಯ ಪೊಲೀಸರ ನಿರ್ಲಕ್ಷವು ಕಾರಣವಾಗಿದೆ
ಉದಯ ವಾರ್ತೆ ಹುಬ್ಬಳ್ಳಿ