ಬೀದರ್: ಪ್ರಧಾನಿ ಮೋದಿಯನ್ನು ಬದಲಾವಣೆ ಮಾಡಬೇಕು ಎಂದು RSS ಸಭೆ ನಡೆಸಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೊಸ ಬಾಂಬ್ ಸಿಡಿಸಿದ್ದಾರೆ, ನಗರದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯನ್ನು ಬದಲಾವಣೆ ಮಾಡಬೇಕು ಹುನ್ನಾರ ಮಾಡಲಾಗುತ್ತಿದೆ. ಈ ಬಗ್ಗೆ ಬಿಜೆಪಿಯ ನಾಯಕರನ್ನು ಕೇಳಿ ಎಂದು ತಿರುಗೇಟು ನೀಡಿದರು.
ಚಾಮರಾಜನಗರದಲ್ಲಿ ಸತೀಶ್ ಜಾರಕಿಹೊಳಿ, ಪರಮೇಶ್ವರ್, ಮಹಾದೇವಪ್ಪ ನಡೆಸಿದ ಡಿನ್ನರ್ ಸಭೆಯ ಬಗ್ಗೆ ಪ್ರತಿಕ್ರಿಯಿಸಿ, ಎಲ್ಲಾ ಕಡೆ ಸಭೆ ನಡೆಯುವುದು ಸಾಮಾನ್ಯ ಎಂದು ತೇಪೆ ಹಚ್ಚಿ ಸಿಎಂ ಬದಲಾವಣೆಗೆ ಪಿಎಂ ಬದಲಾವಣೆ ವಿಚಾರವನ್ನು ಮುನ್ನೆಲೆಗೆ ತಂದರು.
ಮಾತು ಎತ್ತಿದರೆ ಬರೀ ಮುಡಾ, ಮುಡಾ ಅಂತಾರೆ. ಮುಡಾ ಹಗರಣದಲ್ಲಿ ಏನಾದ್ರೂ ದಾಖಲಾತಿ ಇದೆಯೇ ಎಂದು ಸಚಿವ ಲಾಡ್ ಪ್ರಶ್ನೆ ಮಾಡಿದರು. ಯಾರೋ ಒಬ್ಬರು ರಾಜ್ಯಪಾಲರಿಗೆ ದೂರು ಕೊಟ್ಟರು. ರಾಜಕೀಯ ದುರುದ್ದೇಶದಿಂದ ರಾಜ್ಯಪಾಲರು ಪ್ರಾಷಿಕ್ಯೂಶನ್‌ಗೆ ಅನುಮತಿ ನೀಡಿದ್ದಾರೆ ಎನ್ನುವುದು ಜಗಜ್ಜಾಹಿರಾಗಿದೆ ಎಂದು ಹೇಳಿದರು.