15 ವರ್ಷದ ಮಗಳ ಜೊತೆ ಸೇರಿಕೊಂಡು ಸೈಕಲ್ ಕಳ್ಳತನ: ಮಲತಂದೆ ಅರೆಸ್ಟ್!

Share to all

ಬೆಂಗಳೂರು:- ಹುಳಿಮಾವು ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಅಪ್ರಾಪ್ತ ಮಗಳ ಜೊತೆ ಸೇರಿಕೊಂಡು ಸೈಕಲ್​ ಕದಿಯುತ್ತಿದ್ದ ಮಲತಂದೆಯನ್ನು ಬಂಧಿಸಿರುವ ಘಟನೆ ಜರುಗಿದೆ. ಮೊಹಮ್ಮದ್ ಫಯಾಜ್ ಉದ್ದೀನ್ ಬಂಧಿತ ಆರೋಪಿ. ಈತ ತನ್ನ ಮಗಳನ್ನು ಜೊತೆಯಾಗಿಸಿಕೊಂಡು ಬೆಂಗಳೂರಿನ ಅಪಾರ್ಟ್​ಮೆಂಟ್​ಗಳಲ್ಲಿ ಸೈಕಲ್​ ಕದಿಯುತ್ತಿದ್ದ. ಸದ್ಯ ತಂದೆ-ಮಗಳ ಕೃತ್ಯ ಬಯಲಾಗಿದ್ದು ಪೊಲೀಸರು ತಂದೆಯನ್ನು ಬಂಧಿಸಿ 15 ವರ್ಷದ ಅಪ್ರಾಪ್ತೆ ವಿರುದ್ಧವೂ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಅಪಾರ್ಟ್​ಮೆಂಟ್​ಗಳಿಗೆ ಹೋಗಿ ಲಾಕ್ ಮಾಡದಿರುವ ಸೈಕಲ್​ಗಳನ್ನು ಈ ಆರೋಪಿಗಳು​ ಕಳವು ಮಾಡುತ್ತಿದ್ದರು. ಆರೋಪಿ ಮೊಹಮ್ಮದ್ ಸೈಕಲ್​ ಕಳ್ಳತನಕ್ಕೆ ಅಪ್ರಾಪ್ತೆ ಮಗಳನ್ನು ಕರೆದೊಯ್ಯುತ್ತಿದ್ದ. ಮಗಳು ಸೈಕಲ್​ ತುಳಿದುಕೊಂಡು ಬಂದರೆ ಅನುಮಾನ ಬರ್ತಿರಲಿಲ್ಲ. ಹಾಗಾಗಿ ಮಗಳನ್ನು ಸೈಕಲ್ ಕದಿಯಲು ಕರೆದೊಯ್ಯುತ್ತಿದ್ದ. ಬಂಧಿತನಿಂದ ಒಟ್ಟು 22 ಸೈಕಲ್​ಗಳನ್ನು ವಶಕ್ಕೆ ಪಡೆಯಲಾಗಿದೆ.


Share to all

You May Also Like

More From Author