ಕಾರು ಬಿಟ್ಟು ನಡುರಸ್ತೆಯಲ್ಲೇ ಬೈಕ್ ಏರಿ ಹೋದ ಕಮೀಷನರ್..ಬೈಕ್ ನಲ್ಲಿ ಕಮೀಷನರ್ ಹೋಗಿದ್ದೆಲ್ಲಿಗೆ ಅಂತೀರಾ ಈ ಸ್ಟೋರಿ ನೋಡಿ…..
ಹುಬ್ಬಳ್ಳಿ:- ಕಳೆದ ಎರಡ್ಮೂರು ದಿನಗಳಿಂದ ಹುಬ್ಬಳ್ಳಿ-ಧಾರವಾಡದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಮಳೆಯಿಂದ ಆಗಬಹುದಾದ ಸಮಸ್ಯೆಗಳ ಬೆನ್ನು ಬಿದ್ದಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ್ ಇಂದು ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಬೈಕ್ ಏರಿ ಮಳೆ ಹಾನಿ ಪ್ರದೇಶ ಮತ್ತು ನಾಲಾಗಳ ವೀಕ್ಷಣೆ ಮಾಡಿದರು.
ತಮ್ಮ ವಾಹನ (ಕಾರು) ಹೋಗದ ಸ್ಥಳಗಳಿಗೆ ಕಾರು ಬೇಡಾ ಬರ್ರೀ ಬೈಕ್ ತಗೊಳ್ಳಿ ನಾನೇ ಬರತೇನಿ ಅಂತಾ ಹೇಳಿ ಬೈಕ್ ಏರಿ ಹೋಗೋದನ್ನ ನೋಡಿದ ಪಾಲಿಕೆಯ ಅಧಿಕಾರಿಗಳು ಬಾಯ ಮೇಲೆ ಕೈ ಇಟ್ಟುಕೊಂಡು ಇವರೇನ್ರೀ ನಮ್ಮ ಸಾಹೇಬ್ರು ಅಂತಾ ಅಂದುಕೊಂಡು ಅವರೂ ಸಹ ಪ್ಯಾಂಟ್ ಏರಿಸಿ ನಡೆದೇ ಬಿಟ್ಟರು.
ಇಂತಹದೊಂದು ಘಟನೆ ನಡೆದಿದ್ದು ಧಾರವಾಡದ ಜಾಧವ ಪ್ಲಾಟ್ ನಲ್ಲಿ.ಬೆಳೆಗ್ಗೆಯಿಂದಲೇ ಮಳೆ ಹಾನಿ ಪ್ರದೇಶಗಳಿಗೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.