ಹುಬ್ಬಳ್ಳಿ ಕಾಂಗ್ರೆಸ್ ಗಲಾಟೆಗೆ ಡಿಕೆಶಿ ಎಂಟ್ರಿ: ಉಚ್ಛಾಟನೆ ರದ್ದು ಹೊಸ ಅಧ್ಯಾಯಕ್ಕೆ ಚಿಂತನೆ.!!
ಹುಬ್ಬಳ್ಳಿ : ಕಳೆದ ಕೆಲ ದಿನಗಳ ಹಿಂದೆ ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ನಡೆದ ಗಲಾಟೆ ವಿಷಯ ಸದ್ಯ ಹುಬ್ಬಳ್ಳಿ ಧಾರವಾಡ ಕಾಂಗ್ರೆಸ್ ಪಾಳಯದಲ್ಲಿ ತಾರಕಕ್ಕೆ ಏರಿದ ಹಾಗೆ ಕಾಣಿಸುತ್ತಿದೆ.ಇಂದು ಸಂಜೆ 6.30 ಸುಮಾರಿಗೆ ನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ ತಮ್ಮ ಮೇಲೆ ಹಲ್ಲೆ ಮಾಡಿ ಅಗೌರವ ತೋರಿದ್ದ ಶಹಜಾನ್ ಮುಜಾಹಿದ್ದೀನ್ ಅವರನ್ನ ಉಚ್ಛಾಟನೆ ಮಾಡಿ ಆರ್ಡರ್ ಮಾಡಿದ್ದರು.ಉಚ್ಛಾಟನೆ ಪ್ರತಿಯಲ್ಲಿ ಅದಕ್ಕೆ ಕಾರಣಗಳನ್ನು ಕೂಡ ವಿವರಿಸಿದ್ದರು
ಇದೀಗ ಕೆಲವೇ ಗಂಟೆಯಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸೂಚನೆ ಮೇರೆಗೆ ಶಹಜಮಾನ್ ಉಚ್ಚಾಟಣೆಯನ್ನು ತಡೆಹಿಡಿದು ಆರ್ಡರ್ ಮಾಡಲಾಗಿದ್ದು.ನಗರದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಶೀಘ್ರದಲ್ಲೇ ಬದಲಾಯಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.