ಬೆಳಂಬೆಳಿಗ್ಗೆ ಹಲವೆಡೆ ಅಧಿಕಾರಿಗಳ ಮನೆ ಮೇಲೆ ಲೋಕಾ ದಾಳಿ! ಶೋಧ.*
ಬೆಳಗಾವಿ: ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಅಧಿಕಾರಿಗಳು ನಿದ್ದೆ ಮಂಪರಿನಲ್ಲಿದ್ದ ಇಬ್ಬರು ಅಧಿಕಾರಿಗಳಿಗೆ ಬೆಳ್ಳಂ ಬೆಳಗ್ಗೆ ಶಾಕ್ ನೀಡಿದ್ದಾರೆ.
ಬೆಳಗಾವಿಯ ಪಂಚಾಯತ್ ರಾಜ ಇಲಾಖೆ ಸಹಾಯಕ ಕಾರ್ಯನಿರತ ಎಂಜಿನೀಯರ್ ಎಂ.ಎಸ.ಬಿರಾದಾರ ಮನೆ ಮೇಲೆ ಲೋಕಾಯುಕ್ತ ಎಸ್ಪಿ ಹನುಮಂತರಾಯ್ ನೇತೃತ್ವದಲ್ಲಿ ಡಿಎಸ್ಪಿ ಜೆ.ರಘು ತಂಡದಿಂದ ದಾಳಿ ನಡೆಸಲಾಗಿದೆ.
ವಿಶ್ವೇಶ್ವರಯ್ಯ ನಗರದ ಶ್ರದ್ಧಾ ಅಪಾರ್ಟಮೆಂಟ್‌ನಲ್ಲಿ ಇರುವ ಮನೆ ಹಾಗೂ ಕಿತ್ತೂರು, ಖಾನಾಪುರದಲ್ಲಿ ಇರುವ ನಿವಾಸಗಳ ಮೇಲೂ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಲೋಕಾಯುಕ್ತ ದಾಳಿ ನಡೆಸಿ ಪರಿಶೀಲನೆ ಮುಂದುವರೆದಿದೆ.
ಇತ್ತ ಕಲಬುರಗಿಯ ಟೌನ್ ಪ್ಲ್ಯಾನ್ ವಿಭಾಗದ ಅಪ್ಪಾಸಾಹೇಬ್ ಕಾಂಬಳೆ ಮನೆ ಮೇಲೂ ದಾಳಿ ಮಾಡಲಾಗಿದೆ.
ಬೆಳಗಾವಿ ನಗರದ ರಾಮತೀರ್ಥ ನಗರದ ನಿವಾಸ ಮತ್ತು ಇಲ್ಲಿನ ಆಟೋ ನಗರದಲ್ಲಿ ಇರೋ ಕಾರ್ಖಾನೆ ಮೇಲೆ ದಾಳಿ ಮಾಡಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಹಾಸನದ ಕೆಪಿಟಿಸಿಎಲ್ ಜ್ಯೂನಿಯರ್ ಇಂಜನೀಯರ್ ಮನೆ ಹಾಗೂ ಕಛೇರಿ ಮೇಲೆಯೂ ಲೋಕಾಯುಕ್ತರು ದಾಳಿ ಮಾಡಿದ್ದಾರೆ. ನಾರಾಯಣ ಎಂಬುವರ ಮನೆ ಹಾಗೂ ಕಛೇರಿ ಮೇಲೆ ದಾಳಿ ಮಾಡಿದ್ದಾರೆ.
ಉದಯ ವಾರ್ತೆ ಬೆಳಗಾವಿ/ಹಾಸನ