ಹುಲಿ ಉಗುರಿನ ಪೆಂಡೆಂಟ್ ಅರಣ್ಯ ಅಧಿಕಾರಿ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ……
ಯಲ್ಲಾಪುರ.
ಹುಲಿ ಉಗುರಿನ ಪೆಂಡೆಂಟ್ ಅನ್ನು ಶೋಕಿಗಾಗಿ ಸಾಮಾನ್ಯರು ಧರಿಸುವುದು ಇತ್ತೀಚೆಗೆ ಡ್ರೆಂಡ್ ಆಗಿದೆ. ಟ್ರೆಂಡ್ ಅನ್ಕೊಂಡವರಿಗೆ ಕಾನೂನಿನ ಜ್ಞಾನ ಇಲ್ಲಾ ಅಂದು ಕೊಳ್ಳಬಹುದು ಆದರೆ ಎಲ್ಲಾ ಕಾನೂನು ಗೊತ್ತಿರುವ ಹಾಗೂ ಕಾನೂನಿನ ಬಗ್ಗೆ ತಿಳವಳಿಕೆ ಹೇಳುವ ಅರಣ್ಯ ಅಧಿಕಾರಿಗಳಿಗೆ ವನ್ಯಜೀವಿಗಳ ವಸ್ತುಗಳನ್ನು ಬಳಸುವ ಬಗ್ಗೆ ಕಾನೂನು ಹೇಳಬೇಕಿಲ್ಲಾ.ಎಲ್ಲಾ ಕಾನೂನು ಗೊತ್ತಿದ್ದೂ ಜಾಣ ಕುರುಡರಂತೆ ವರ್ತಿಸುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವವರು ಯಾರು?ಬೆಕ್ಕಿನ ಕೊರಳಿಗೆ ಘಂಟೆ ಕಟ್ಟುವವರು ಯಾರು ಅನ್ನೋ ಪ್ರಶ್ನೆ ಈಗ ಯಲ್ಲಾಪುರ ಸುತ್ತಮುತ್ತಲಿನ ಸಾರ್ವಜನಿಕರಿಗೆ ಕಾಡತಾ ಇದೆ.
ಹೌದು ಇಷ್ಟೆಲ್ಲಾ ನಾವು ಹೇಳತಾ ಹೊರಟಿರುವಿದು ಯಲ್ಲಾಪುರ DRFO ಶ್ರೀನಿವಾಸ ನಾಯ್ಕ ಅವರದ್ದು ಅವರು ಅರಣ್ಯ ಇಲಾಖೆಯ ಅಧಿಕಾರಿಗಳಷ್ಟೇ ಅಲ್ಲಾ ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿ ಮತ್ತು ಮೋಜಣಿದಾರರ ಸಂಘದ ರಾಜ್ಯಾದ್ಯಕ್ಷರು ಮತ್ತು ಶಿರಸಿ ವ್ರತ್ತದ ಜಿಲ್ಲಾದ್ಯಕ್ಷರೂ ಹೌದು ಇಷ್ಟೆಲ್ಲಾ ಇದ್ದು ಕಾನೂನಿನ ಅರಿವು ಇಟ್ಟಕೊಂಡು ತಮ್ಮ ಕೊರಳಲ್ಲಿ ಹುಲಿ ಉಗುರಿನ ಪೆಂಡಂಟ್ ಧರಿಸುವುದು ಎಷ್ಟು ಸರಿ ಅಂತಾ ಸಾಮಾನ್ಯರು ಮಾತಾಡತಿದ್ದಾರೆ ಅವರು ಹುಲಿ ಉಗುರಿನ ಪೆಂಡೆಂಟ್ ಧರಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಇವರು ಆ ಪೆಂಡೆಂಟ್ ಧರಿಸಿರುವುದು ಅಲ್ಲಿಯ ಎಲ್ಲಾ ಅರಣ್ಯ ಅಧಿಕಾರಿಗಳಿಗೆ ಗೊತ್ತಿದ್ದರೂ ನಮಗ್ಯಾಕೆ ಅಂತಾ ಸುಮ್ಮನಿದ್ದಾರಂತೆ.ಅವರು ಧರಿಸಿರುವುದು.ಆ ಅಧಿಕಾರಿಯ ಪೆಂಡೆಂಟ್ ವಿಚಾರವನ್ನ ಹಿರಿಯ ಅಧಿಕಾರಿಗಳು ಏನ ಕ್ರಮ ಕೈಕೊಳ್ಳತಾರೆ ಕಾದು ನೋಡಬೇಕಿದೆ..
ರಾಜ್ಯಾದ್ಯಂತ ಹುಲಿ ಉಗುರಿನ ಪೆಂಡೆಂಟ್ ಸದ್ದು ಮಾಡುತ್ತಿದ್ದರೂ ಈ ಅಧಿಕಾರಿಗಳ ಮೇಲೆ ಕ್ರಮ ಏಕಿಲ್ಲಾ ಅನ್ನೋ ಪ್ರಶ್ನೆ ಮೂಡಿದೆ.ಬಹುತೇಕ ರಾಜ್ಯಾದ್ಯಂತ ಸುದ್ದಿ ಆಗತಿದ್ದಂತೆ ಈ ನಾಯ್ಕ ಸಾಹೇಬ್ರು ಅವರು ಧರಿಸಿದ ಹುಲಿ ಉಗುರಿನ ಪೆಂಡೆಂಟ್ ತೆಗೆದಿದ್ದಾರಂತೆ ಅದೆಲ್ಲವನ್ನು ಅವರ ಹಿರಿಯ ಅಧಿಕಾರಿಗಳು ಪರಿಶೀಲನೆ ಮಾಡಬೇಕಾಗುತ್ತೇ ಅಷ್ಟೇ..
ಉದಯ ವಾರ್ತೆ ಯಲ್ಲಾಪುರ