ಅವರ ಅಪ್ಪಂಗೆ ಅವ್ರು ಹುಟ್ಟಿದ್ರೆ ಸಿಡಿ ರಿಲೀಸ್ ಮಾಡ್ಲಿ: ಮುಸ್ಲಿಂ ಮುಖಂಡರಿಗೆ ಯತ್ನಾಳ್ ಸವಾಲ್!

Share to all

ವಿಜಯಪುರ:– ಸಿಡಿ ಬಿಡುಗಡೆ ಮಾಡುತ್ತೇನೆ ಎಂದಿರುವ ಮುಸ್ಲಿಂ ಮುಖಂಡರ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ X ಮಾಡಿರುವ ಅವರು, ನಾವು ವಕ್ಫ್ ಆಸ್ತಿಯ ಲೂಟಿಯ ಬಗ್ಗೆ ಪ್ರತಿಭಟನೆಗೆ ಮುಂದಾಗಿರುವಾಗ ನನ್ನ ಸಿ.ಡಿ ಬಿಡುಗಡೆ ಮಾಡುತ್ತೀನಿ ಎಂದು ಹೇಳಿರುವುದನ್ನು ನಾನು ಗಮನಿಸಿದ್ದೇನೆ. ಖಾದ್ರಿ ಎಂಬ ಒಬ್ಬ ವಕ್ಫ್ ಆಸ್ತಿ ಲೂಟಿಕೋರ, ಹಿಂದೆ ಜಿಲ್ಲೆಯಿಂದ ಗಡೀಪಾರಾಗಿದ್ದವನು.

ಹಿಂದೆಯೂ ನಾನು ಹೇಳಿದ್ದೆ ಅವರ ಅಪ್ಪನಿಗೆ ಯಾರಾದರು ಹುಟ್ಟಿರುವವರು ಬಿಡುಗಡೆ ಮಾಡಲಿ ಎಂದು, ಈಗ ಅದನ್ನೇ ಪುನರುಚ್ಚರಿಸುತ್ತಿದ್ದೇನೆ. ಇಂತಹ ಅಯೋಗ್ಯರ ಹೇಳಿಕೆಗಳನ್ನು ಕೆಲ ಮಾಧ್ಯಮಗಳು ವೈಭವೀಕರಿಸುತ್ತಿರುವುದನ್ನೂ ಗಮನಿಸಿದ್ದೇನೆ. ಈಗಾಗಲೇ ಮಾನಹಾನಿ ಪ್ರಕರಣದ ಜೊತೆಗೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಮುಂದಾಗಿದ್ದೇನೆ” ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸಾಮಾಜಿಕ ಮಾಧ್ಯಮ ಎಕ್ಸ್​​ ಮುಖಾಂತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Share to all

You May Also Like

More From Author