ಕರ್ನಾಟಕ ವಿಧಾನ ಪರಿಷತ್ ಕಾರ್ಯದರ್ಶಿ-2 ಹುದ್ದೆಗೆ ಬಡ್ತಿ ಪಡೆದ ಎಸ್.ನಿರ್ಮಲಾ: ರಾಜ್ಯ ಸರ್ಕಾರದ ಆದೇಶ!

Share to all

ಕರ್ನಾಟಕ ವಿಧಾನ ಪರಿಷತ್ ಕಾರ್ಯದರ್ಶಿ-2 ಹುದ್ದೆಗೆ ಎಸ್.ನಿರ್ಮಲಾಗೆ ಬಡ್ತಿ ನೀಡಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.

ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮೀ ಅವರು ಪ್ರಕಟಣೆ ಹೊರಡಿಸಿ, ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಅಧಿಕಾರಿ ಮತ್ತು ನೌಕರರ ನೇಮಕಾತಿ ಹಾಗೂ ಸೇವಾ ಷರತ್ತುಗಳು, ನಿಯಮಗಳು, 2021ರ ನಿಯಮ 6(i)ರ ಪ್ರಕಾರ ಮಾನ್ಯ ವಿಶೇಷ ಮಂಡಳಿಗೆ ಪ್ರದತ್ತವಾಗಿರುವ ಅಧಿಕಾರದ ರೀತ್ಯಾ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ನಿಯಮಗಳು, 2024ರ ಅನ್ವಯ ಅಪರ ಕಾರ್ಯದರ್ಶಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್.ನಿರ್ಮಲಾ ಇವರನ್ನು ಹೊಸದಾಗಿ ಸೃಜನೆಯಾಗಿರುವ ಕಾರ್ಯದರ್ಶಿ-2 ಹುದ್ದೆಗೆ ಸ್ಥಾನಕ್ಕೆ ಬಡ್ತಿ ನೀಡಿ ನೇಮಕ ಮಾಡಲಾಗಿದೆ ಎಂದರು.

ಕರ್ನಾಟಕ ವಿಧಾನ ಪರಿಷತ್ ಅಪರ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಎಸ್. ನಿರ್ಮಲಾ ಅವರಿಗೆ ಹೊಸದಾಗಿ ಸೃಜನೆಯಾಗಿರುವ ಕಾರ್ಯದರ್ಶಿ-2 ಹುದ್ದೆಗೆ ಬಡ್ತಿ ನೀಡಿ ಸರ್ಕಾರ ಆದೇಶಿಸಿದೆ


Share to all

You May Also Like

More From Author