ಮನೆಯಲ್ಲಿ ಜಿರಳೆ ಕಾಟವೇ!? 5 ನಿಮಿಷದಲ್ಲಿ ಹೊರಹಾಕಲು ಸಿಂಪಲ್ ಟ್ರಿಕ್ ಫಾಲೋ ಮಾಡಿ!

Share to all

ಬಹುತೇಕರ ಮನೆಯಲ್ಲಿ ಈ ಜಿರಳೆಗಳ ಕಾಟ ಇದ್ದೆ ಇರುತ್ತದೆ. ಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟುಕೊಂಡರೂ ಮೂಲೆ ಮೂಲೆಗಳ ಈ ಜಿರಳೆಗಳು ತನ್ನ ಸಂತಾನವನ್ನು ಮುಂದುವರೆಸಿರುತ್ತದೆ. ಹೀಗಾದಾಗ ಹೆಚ್ಚಿನವರು ಮಾರುಕಟ್ಟೆಯಲ್ಲಿ ಸಿಗುವ ಔಷಧಗಳಿಂದ ಪರಿಹಾರ ಕಂಡುಕೊಳ್ಳುತ್ತಾರೆ. ಆದರೆ ಮನೆಯಲ್ಲಿ ನೈಸರ್ಗಿಕ ಪದಾರ್ಥಗಳಿಂದ ಈ ಜಿರಳೆಗಳ ವಂಶವನ್ನೇ ಸಂಪೂರ್ಣವಾಗಿ ನಾಶ ಮಾಡಬಹುದು.

ನಿಮ್ಮ ಮನೆಯಲ್ಲಿರುವ ಕೆಲವೇ ಕೆಲವು ಪದಾರ್ಥಗಳ ಸಹಾಯದಿಂದ ಮನೆಯ ಯಾವುದೇ ಮೂಲೆಯಲ್ಲಿ ಅಡಗಿರುವ ಜಿರಳೆಗಳನ್ನು ಕೂಡ ಕೇವಲ ಐದೇ ನಿಮಿಷಗಳಲ್ಲಿ ಮನೆಯಿಂದ ಓಡಿಸಬಹುದು.

ಮೊದಲು ಈರುಳ್ಳಿಯನ್ನು ತೆಗೆದುಕೊಂಡು ಅದರ ಹಿಂದೆ ಮುಂದೆ ಕತ್ತರಿಸಿ. ಈರುಳ್ಳಿ ಮೇಲ್ಭಾಗದಲ್ಲಿ ಪೇಸ್ಟ್ ಹಾಕಿ ಸುತ್ತಲೂ 4-5 ಲವಂಗಗಳನ್ನು ಅಂಟಿಸಿ. ಇದರ ಮಧ್ಯದಲ್ಲಿ ಕರ್ಪೂರವನ್ನು ಹಚ್ಚಿ. ಒಮ್ಮೆ ಮನೆಯ ಸುತ್ತಲೂ ಇದರ ಹೊಗೆ ಹೋಗುವಂತೆ ಮಾಡಿ.

ಈ ಸಿಂಪಲ್ ಟ್ರಿಕ್ ಮಾಡುವುದರಿಂದ ಮನೆಯ ಯಾವುದೇ ಮೂಲೆಯಲ್ಲಿ ಅವಿತಿರುವ ಜಿರಳೆಗಳು ಕೂಡ ಕೇವಲ ಐದೇ ಐದು ನಿಮಿಷಗಳಲ್ಲಿ ಮನೆಯಿಂದ ಹೊರಹೋಗುತ್ತವೆ.

ಅಲ್ಲದೇ ಪುಲಾವ್ ಎಲೆಗಳನ್ನು ಪುಡಿ ಮಾಡಿ ನೀರಿಗೆ ಬೆರೆಸಿ ಕುದಿಸಿ, ತಣ್ಣಗಾದ ಬಳಿಕ ಮನೆಯ ಮೂಲೆಗಳಲ್ಲಿ ಸಿಂಪಡಿಸಿದರೆ ಜಿರಳೆಗಳು ಅಲ್ಲಿಂದ ಓಡಿಹೋಗುತ್ತವೆ.
ಸ್ಪ್ರೇ ಬಾಟಲಿಯಲ್ಲಿ ಸಮ ಪ್ರಮಾಣದಲ್ಲಿ ನಿಂಬೆ ರಸ ಮತ್ತು ನೀರನ್ನು ಮಿಶ್ರಣ ಮಾಡಿ ಅಡುಗೆಮನೆ ಹಾಗೂ ಮನೆಯ ಮೂಲೆಗಳಲ್ಲಿ ಸ್ಪ್ರೇ ಮಾಡಿದರೆ ಜಿರಳೆಗಳು ಸಾಯುತ್ತವೆ.


Share to all

You May Also Like

More From Author