ಬಿಗ್ ಬಾಸ್ ಸೀಸನ್ 11 ಎಂದಾಕ್ಷಣ ತಕ್ಷಣ ನೆನಪಿಗೆ ಬರೋದು ಲಾಯರ್ ಜಗದೀಶ್ ಅವರು. ಕಿರಿಕ್ ಮಾತುಗಳಿಂದ, ಬಹಳ ಫೇಮಸ್ ಆಗಿದ್ದರು. ಆದರೆ ಕಳೆದ ವಾರ ಹೆಣ್ಣು ಮಕ್ಕಳ ಮೇಲೆ ಅವಾಚ್ಯ ಪದ ಬಳಸಿದ್ದಾರೆಂದು ಅವರನ್ನು ಮನೆಯಿಂದ ಹೊರಗೆ ಕಳಿಸಲಾಗಿದೆ. ಮೂರನೇ ಪಂಚಾಯಿತಿ ನಡೆಸುತ್ತಿರುವ ಕಿಚ್ಚ ಸುದೀಪ್ ಅವರು, ನ್ಯಾಯವನ್ನು ಎತ್ತಿ ಹಿಡಿದು ಜಗದೀಶ್ ರೊಂದಿಗೆ ತುಂಬಾ ಅಸಭ್ಯವಾಗಿ ನಡೆದುಕೊಂಡ ಕೆಲ ಸ್ಪರ್ಧಿಗಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಲರ್ಸ್ ವಾಹಿನಿ ಹಂಚಿಕೊಂಡಿರುವ ಹೊಸ ಪ್ರೋಮೋದಲ್ಲಿ ಬಿಗ್ಬಾಸ್ ವೇದಿಕೆ ಮೇಲೆ ಜಗದೀಶ್ ಕಾಣಿಸಿಕೊಂಡಿದ್ದಾರೆ. ಹೌದು, ಜಗದೀಶ್ ಮಾತನಾಡಿರುವ ವಿಡಿಯೋವನ್ನು ಸುದೀಪ್ ಪ್ರಸಾರ ಮಾಡಿದ್ದಾರೆ. ವಿಡಿಯೋನಲ್ಲಿ ತಮ್ಮ ವರ್ತನೆ ಬಗ್ಗೆ ಕ್ಷಮೆ ಕೇಳಿರುವ ಜಗದೀಶ್, ಮನೆಯ ಸದಸ್ಯರ ಬಗ್ಗೆ ಸಹ ಮಾತನಾಡಿದ್ದಾರೆ. ಸಾಧ್ಯವಾದರೆ ನನ್ನನ್ನು ವಾಪಸ್ ಕರೆಸಿಕೊಳ್ಳಿ ಎಂದು ಮನವಿ ಸಹ ಮಾಡಿದ್ದಾರೆ. ನಿನ್ನೆ ಸುದೀಪ್, ಜಗದೀಶ್ ಪರವಾಗಿ ಮಾತನಾಡಿದ್ದರು, ಈಗ ಅವರ ವಿಡಿಯೋ ಪ್ರಸಾರ ಮಾಡಿರುವುದು ನೋಡಿದರೆ ಜಗದೀಶ್ ಅನ್ನು ಮತ್ತೆ ಒಳಗೆ ಕರೆಸಿಕೊಳ್ಳುತ್ತಾರೆಯೇ ನೋಡಬೇಕಿದೆ.